ವಿಟ್ಲ: ಪೆರುವಾಯಿ ಸೊಸೈಟಿ ಆವರಣದೊಳಗೆ ನ. 18 ರಂದು ಮೇಯುತ್ತಿದ್ದ 4 ಗೋವುಗಳನ್ನು ತಡರಾತ್ರಿ ಮೂವರು ಮುಸುಕುಧಾರಿಗಳು ಕದ್ದೊಯ್ಯುವುದನ್ನು ಸಿಸಿ ಕ್ಯಾಮರಾದಲ್ಲಿ ಗಮನಿಸಿ ಗಣೇಶ್ ರೈ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ನಾರಾಯಣ ನಾಯ್ಕ ಹಾಗೂ ಗಣೇಶ್ ರೈ ಅವರ ದನಗಳು ಎಂದಿನಂತೆ ನ.18 ರಂದೂ ಸೊಸೈಟಿಯ ಆವರಣದಲ್ಲಿ ಮೇಯುತ್ತಿದ್ದವು. ಸಂಜೆಯಾದಾಗ ದನಗಳು ಅಲ್ಲಿಯೇ ಇರುವಂತೆಯೇ ಸೊಸೈಟಿಯ ನೌಕರರು ಗೇಟಿನ ಬೀಗವನ್ನು ಹಾಕಿ ಹೋಗಿದ್ದರು.
ನ. 19ರಂದು ಸೊಸೈಟಿಯ ಸಿಸಿ ಟಿವಿ ದೃಶ್ಯಾವಳಿಯಲ್ಲಿ ದನಗಳನ್ನು ಸೊಸೈಟಿಯ ಗೇಟಿನ ಬೀಗ ಮುರಿದು ಅಕ್ರಮ ಪ್ರವೇಶ ಮಾಡಿ 4 ದನಗಳನ್ನು ಎಳೆದುಕೊಂಡು ಹೋಗುತ್ತಿರುವುದು ಕಂಡು ಬಂದಿರುತ್ತದೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ




























