ಚಿಕ್ಕೋಡಿ: ಮದುವೆಯಾಗಿ ಮೂರು ಮಕ್ಕಳಿರುವ ತಂದೆಯೊಂದಿಗೆ 19ರ ಯುವತಿ ಪರಾರಿಯಾಗಿದ್ದಾಳೆ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ಸಲ್ಲಿಸಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗದಲ್ಲಿ ನಡೆದಿದೆ.
ಮೂರು ಮಕ್ಕಳ ತಂದೆ ಸುರೇಶ್ ಎಂಬಾತನೋಂದಿಗೆ ಯುವತಿ ಎಸ್ಕೇಪ್ ಆಗಿದ್ದು, ಕುಟುಂಬಸ್ಥರು, ಅಪಹರಣ ಮಾಡಿರೋದಾಗಿ ದೂರು ನೀಡಿದ್ದಾರೆ.
ಕಾಲೇಜಿಗೆ ಹೋಗಿದ್ದ ಯುವತಿ ಮರಳಿ ಬಾರದ ಹಿನ್ನೆಲೆ ಸುರೇಶ್ ಹುಲ್ಲೇನ್ನವರ್ ವಿರುದ್ಧ ಆರೋಪಿಸಿ ರಾಯಭಾಗ ಠಾಣೆಯಲ್ಲಿ ದೂರು ನೀಡಿದ್ದಾರೆ.




























