ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ 17ನೇ ವಾರ್ಡ್ ನ ಸದಸ್ಯರು ಹಾಗೂ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೋಟ್ಟು ಇವರು 15ನೇ ಹಣಕಾಸು ಮತ್ತು SFC ಮುಕ್ತ ನಿಧಿ ಅಡಿಯಲ್ಲಿ ಪಳೇರಿ ಸಂಪರ್ಕ ರಸ್ತೆ , ಮಾಡ್ತೇಲು ಸಂಪರ್ಕ ರಸ್ತೆ ಹಾಗೂ ನಾಯ್ತೋಟ್ಟು ಸಂಪರ್ಕ ರಸ್ತೆಗಳ ಕಾಂಕ್ರೀಟ್ ಪೂರ್ಣಗೊಂಡು ಉದ್ಘಾಟಿಸಲಾಯಿತು.
ಅವರ ಪರಿಶ್ರಮದಿಂದ ಕೊಳವೆ ಬಾವಿಯು ರಚನೆಯಾಗಿ ವಾರ್ಡಿನ ನೀರಿನ ಸಮಸ್ಯೆಯನ್ನು ಬಗೆಹರಿಸಿದರು. ಸಮಾರೋಪ ಸಮಾರಂಭ ವಿಲ್ಫಿ ಡಿಸೋಜಾ ಅವರ ಮನೆಯಲ್ಲಿ ನಡೆಸಲಾಯಿತು. ಕರುಣಾಕರ ನಾಯ್ತೋಟ್ಟು ಇವರಿಗೆ ಬೂತ್ ವತಿಯಿಂದ ಸನ್ಮಾನಿಸಲಾಯಿತು.
ಬೂತ್ ಕಾರ್ಯದರ್ಶಿ ರವಿ ಅಂಚನ್ ಕಾರ್ಯಕ್ರಮ ನಿರೂಪಿಸಿದರು ಪ್ರವೀಣ್ ರಾಜ್ ಕಾಮಟ ಸ್ವಾಗತಿಸಿದರು ವಿಶ್ವನಾಥ ನಾಯ್ತೊಟ್ಟು ವಂದಿಸಿದರು ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯದರ್ಶಿ ಶ್ರೀ ಕೃಷ್ಣ, ವಿಟ್ಲ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಹರೀಶ್ ಸಿ ಹೆಚ್, ಶಕ್ತಿಕೇಂದ್ರ ಅಧ್ಯಕ್ಷ ಲಕ್ಷ್ಮಣ ಮಾಡ, ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯದರ್ಶಿ ನಿತಿನ್ ಬೊಡ್ಡೋಣಿ, ನಿಕಟ ಪೂರ್ವ ಶಕ್ತಿಕೇಂದ್ರ ಅಧ್ಯಕ್ಷ ವೀರಪ್ಪ ಗೌಡ ರಾಯರಬೆಟ್ಟು, ಬೂತ್ ಅಧ್ಯಕ್ಷ ಮೋನಪ್ಪ ಗೌಡ ರಾಯರಬೆಟ್ಟು, ನವೀನಚಂದ್ರ ನಡುವಡ್ಕ ಸಹಕಾರಿ ಸಂಘದ ನಿರ್ದೇಶಕರಾದ ಉದಯ್ ಕುಮಾರ್ ನಾಯ್ತೋಟ್ಟು ಹಾಗೂ ಹರೀಶ್ ಮಾಮೇಶ್ವರ ಕಟ್ಟೆ ಹಿರಿಯರಾದ ಜಗದೀಶ್ಚಂದ್ರ ನಾಯ್ತೋಟ್ಟು, ರಮೇಶ್ ಮಾಡ್ತೇಲ್, ಹರೀಶ್ ಕುಮಾರ್ ಪಳೇರಿ, ದಿನೇಶ್ ಮಾಡ್ತೇಲ್, ಮೋಹನ್ ಕಾಮಟ, ಹರೀಶ್ ಮಾಡ್ತೇಲ್ ಪದ್ಮನಾಭ ಮಾಡ್ತೇಲ್, ದಯಾನಂದ ಬೋಡ್ಡೋಣಿ, ವಸಂತ ಮಾಡ್ತೇಲ್ ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರೂ ಊರಿನ ನಾಗರಿಕರು ಉಪಸ್ತಿತರಿದ್ದರು




























