ವಿಟ್ಲ ಪಡ್ನೂರು ಗ್ರಾಮದ ದೇವರಾದ ವಿಟ್ಲ ಸೀಮೆಯ ಇತಿಹಾಸ ಪ್ರಸಿದ್ಧ ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀದೇವರ ಜೀರ್ಣೋದ್ಧಾರದ ಪ್ರಯುಕ್ತ ಸಾನಿಧ್ಯವೃದ್ದಿಗಾಗಿ ಶ್ರೀ ವಿಷ್ಣು ಯಾಗ ಪವಮಾನ ಅಭಿಷೇಕ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮವು ವೇದಮೂರ್ತಿ ಬ್ರಹ್ಮಶ್ರೀ ಕುಂಟು ಕುಡೇಲು ಶ್ರೀ ರಘುರಾಮ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಶ್ರೀ ಕೃಷ್ಣಯ್ಯ ಕೆ ವಿಟ್ಲ ಶ್ರೀ ಉದಯ ಪ್ರಭು ಶ್ರೀ ಪ್ರಸಾದ ಬನ್ನಿಂತಾಯ ಕಡಂಬು ಕೂಡೂರು ಶ್ರೀ ರಾಮಚಂದ್ರ ಭಟ್ ಪಡಾರು ಭುಜಂಗ ರೈ ಬಲಿಪ ಗುಳಿ ರಾಜರಾಮ ಭಟ್ ಹಾಗೂ ಊರಿನ ಪ್ರಮುಖರು ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಗ್ರಾಮದ ಶ್ರೀ ದೇವರ ಭಕ್ತರು ದೊಡ್ಡ ಮಟ್ಟದಲ್ಲಿ ಸೇರಿದ್ದರು ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು. ನಂತರ ಜೀರ್ಣೋದ್ದಾರ ಸಮಿತಿ ಯ ರಚನೆ ಬಗ್ಗೆ ಸಭೆ ನಡೆಯಿತು.



























