ಪುತ್ತೂರು: 34 ನೆಕ್ಕಿಲಾಡಿ ಗ್ರಾಪಂನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಹಲವು ಪತ್ರಗಳು ಮತ್ತು ಫೋನ್ ಕರೆಗಳು ಬಂದಿದ್ದು ನನಗೆ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ ಎಂದು ಶಾಸಕ ಅಶೋಕ್ ರೈ ಆರೋಪ ಮಾಡಿದ್ದಾರೆ.
ನೆಕ್ಕಿಲಾಡಿ ಗ್ರಾಮದ ಮೈಂದಡ್ಕ ಎಂಬಲ್ಲಿ ಅಂಗನವಾಡಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ನಾನು ಶಾಸಕನಾದ ಬಳಿಕ ಅಭಿವೃದ್ದಿ ಹಾಗೂ ಅನುದಾನ ಹಂಚಿಕೆಯಲ್ಲಿ ರಾಜಕೀಯ ಮಾಡಿಲ್ಲ.ಯಾವುದೇ ಗ್ರಾ.ಪಂ ಆಡಳಿತ ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡಬಾರದು ರಾಜಕೀಯ ಮಾಡಿದ್ದೇ ಆದಲ್ಲಿ ಆ ಗ್ರಾಮ ಉದ್ದಾರ ಆಗಲು ಸಾಧ್ಯವಿಲ್ಲ.
ನೆಕ್ಕಿಲಾಡಿ ಗ್ರಾ.ಪಂ ಪ್ರತೀಯೊಂದು ವಿಚಾರಕ್ಕೂ ರಾಜಕೀಯ ಮಾಡುತ್ತಿದೆ ಎಂಬ ಆರೋಪಗಳಿವೆ. ರಸ್ತೆ ಡಿವೈಡರ್ ಮಧ್ಯೆ ಇರುವ ಹೂವಿನ ಗಿಡಗಳಿಗೆ ನೀರು ಹಾಕಲು ನೆಕ್ಕಿಲಾಡಿ ಗ್ರಾಪಂ ಅಡ್ಡಿಪಡಿಸಿದೆ ಇದು ಸರಿಯಲ್ಲ ಎಂದು ಹೇಳಿದ ಶಾಸಕರು ವೇದಿಕೆಯಲ್ಲಿದ್ದ ಕಾರ್ಯದರ್ಶಿ ಅವರಲ್ಲಿ ಏನದು ಅವ್ಯವಹಾರ ನಿಮ್ಮ ಗಮನಕ್ಕೆ ಬಂದಿದೆಯಾ ಎಂದು ಕೇಳಿದರು.




























