ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಡಿ.13 ಮತ್ತು 14 ರಂದು ನಡೆಯಲಿರುವ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಕ್ಕೆ ಡಿ. 6 ರಂದು ಗೊನೆ ಮುಹೂರ್ತ ನೆರವೇರಿತು.
ದೇವಸ್ಥಾನದಲ್ಲಿ ಪೂಜೆ ಪ್ರಾರ್ಥನೆ ನೆರವೇರಿಸಿದ ಬಳಿಕ ಕ್ಷೇತ್ರದ ಅಧ್ಯಕ್ಷರಾದ ಗಂಗಾಧರ್ ಅಮೀನ್ ಇವರ ತೋಟದಿಂದ ಕ್ಷೇತ್ರದ ತಂತ್ರಿಗಳಾದ ಪ್ರೀತಮ್ ಪುತ್ತೂರಾಯ ಇವರ ನೇತೃತ್ವದಲ್ಲಿ ಅರ್ಚಕರಾದ ಮೋಹನ್ ಭಟ್ ರವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಗೊನೆ ಕಡಿಯಲಾಯಿತು.
ದೇವಸ್ಥಾನದ ಅಧ್ಯಕ್ಷರಾದ ಗಂಗಾಧರ ಅಮೀನ್ ಹೊಸಮನೆ, ಕಾರ್ಯದರ್ಶಿಗಳಾದ ಜಯಂತ್ ಶೆಟ್ಟಿ ಕಂಬಳದಡ್ಡ, ಕೃಷ್ಣಪ್ಪಗೌಡ, ತಾರನಾಥ್ ಮೆರ್ಲ, ಜಯರಾಮ್ ಆಚಾರ್ಯ, , ಸುಗುಣ,ನಯನ ಪ್ರದೀಪ್ , ಪುಷ್ಪಲತಾ ಗಂಗಾಧರ್ ,ಸುನಂದಾ ಜಯರಾಮ್, ಪವನ್ ಶೆಟ್ಟಿ ಕಂಬಳತ್ತಡ್ಡ, ಶಿವಪ್ರಸಾದ್ ಶೆಟ್ಟಿ ,ಸುಭಾಷ್ ,ಮತ್ತು ಹಲವು ಗಣ್ಯರು e ಸಂದರ್ಭದಲ್ಲಿ ಉಪಸ್ಥಿತರಿದ್ದರು.




























