ಮಂಗಳೂರು: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ನ ಕಾರ್ಯಕರ್ತರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ )ನ ಸೋಗಿನಲ್ಲಿ ಚುನಾವಣೆ ಒಳಗೆ ಮರುಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಸಂಸತ್ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಮಾತನಾಡಿದ ಸಂಸದರು, ‘ಎಸ್ಡಿಪಿಐ ಪಕ್ಷವು ಪಿಎಫ್ಐನ ರಾಜಕೀಯ ಮುಖವಾಣಿಯಂತೆ ಕೆಲಸ ಮಾಡುತ್ತಿದೆ.
ಎಸ್ಡಿಪಿಐನ ಹಣಕಾಸು ವ್ಯವಹಾರ ಮತ್ತು ನಿಯಂತ್ರಣವು ಪಿಎಫ್ಐನ ಕೈಯಲ್ಲಿದೆ ಎಂಬುದನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಉಲ್ಲೇಖಿಸಿತ್ತು.
ಜೊತೆಗೆ ನಮ್ಮ ಕರಾವಳಿ ಕರ್ನಾಟಕದ ಭಾಗವು ಪಿಎಫ್ ಐನ ದುಷ್ಕೃತ್ಯವನ್ನು ಸಾಕಷ್ಟು ಕಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೆರವಿನಿಂದಾಗಿ ಸುಹಾಸ್ ಶೆಟ್ಟಿ ಅವರ ಕೊಲೆ ಪ್ರಕರಣವನ್ನು ಎನ್ಐಎ ತನಿಖೆ ನಡೆಸುತ್ತಿದೆ.
ಕಾಂಗ್ರೆಸ್ ಸಹ ಎಸ್ಡಿಪಿಐಗೆ ಬೆಂಬಲ ಕೊಡುತ್ತಿದೆ’ ಎಂದು ಹೇಳಿದರು. ಜೊತೆಗೆ ಇದರ ನಿಯಂತ್ರಣಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.



























