ವಿಟ್ಲ: ಅಲ್ಯುಮೀನಿಯಂ ಕೊಕ್ಕೆಯಿಂದ ತೆಂಗಿನ ಕಾಯಿ ಕೀಳುವ ಸಂದರ್ಭ ಕೊಕ್ಕೆ ವಿದ್ಯುತ್ ತಂತಿಗೆ ತಗಲಿ ಶಾಕ್ ಹೊಡೆದು ವ್ಯಕ್ತಿಯೋರ್ವರು ಸಾವಿಗೀಡಾದ ಘಟನೆ ವರದಿಯಾಗಿದೆ.
ಕರೋಪಾಡಿ ಗ್ರಾಮದ ನಾರಾಯಣ ನಾಯ್ಕ (45)ಮೃತಪಟ್ಟವರು.
ಅವರು ಡಿ.7ರಂದು ಬೆಳಿಗ್ಗೆ ಕರೋಪಾಡಿ ಗ್ರಾಮದ ಪದ್ಯಾಣ ಗಡಿಜಾಗೆ ಎಂಬಲ್ಲಿರುವ ಮನೆಯ ಎದುರುಗಡೆ ತೆಂಗಿನ ಮರದಿಂದ ಅಲ್ಯೂಮಿನಿಯಂ ಕೊಕ್ಕೆಯಿಂದ ತೆಂಗಿನಕಾಯಿ ಕೀಳುವ ಸಮಯ ಆಕಸ್ಮಿಕವಾಗಿ ಕೊಕ್ಕೆ ತೆಂಗಿನ ಮರದ ಪಕ್ಕದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗೆ ತಗುಲಿ ಶಾಕ್ ಹೊಡೆದಿದೆ.
ಪರಿಣಾಮ ಬಿದ್ದ ಅವರನ್ನು ಕೂಡಲೇ ತಮ್ಮ ಗಣೇಶ್ ಅವರು ರಿಕ್ಷಾದಲ್ಲಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಆವೇಳೆಗಾಗಲೇ ನಾರಾಯಣ ಅವರು ಮೃತಪಟ್ಟಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




























