ಲೋಕಕಲ್ಯಾಣ ಹಾಗೂ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಹಿಂದು ಜಾಗರಣ ವೇದಿಕೆ ಸುವರ್ಣನಾಡು ಘಟಕದ ವತಿಯಿಂದ 7ನೇ ವರ್ಷದ ಪಾದಯಾತ್ರೆ (ಧರ್ಮ ಜಾಗೃತಿ ನಡೆ) ಯನ್ನು ದಿನಾಂಕ 28-12-2025, ಆದಿತ್ಯವಾರ ಬೆಳಿಗ್ಗೆ 4.00 ಗಂಟೆಗೆ ಆಯೋಜಿಸಲಾಗಿದೆ.
ಈ ಪಾದಯಾತ್ರೆ ಸುವರ್ಣನಾಡು ಶ್ರೀ ದುರ್ಗಾಂಭಿಕ ಸಿದ್ದೇಶ್ವರಿ ಸಾನಿಧ್ಯದಿಂದ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದವರೆಗೆ ಕಾಲ್ನಡಿಗೆ ಮೂಲಕ ನಡೆಯಲಿದೆ.
ಪಾದಯಾತ್ರೆಯ ನಂತರ ಧರ್ಮ ಜಾಗೃತಿ ಸಭೆ ಆಯೋಜಿಸಲಿದ್ದು, ಈ ಸಭೆಯಲ್ಲಿ
ಸಹನ ಭಟ್ (ಅಧ್ಯಾಪಕಿ) ಅವರು ಬೌಧಿಕ್ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಗಣ್ಯರಾಗಿ
- ಸಂತೋಷ್ ಪೊಳಲಿ (ಹಿಂದು ಮುಖಂಡರು)
- ಜಗದೀಶ್ ನೆತ್ತರಕೆರೆ (ಸೇವಾ ಜಾಗರಣ ಬಂಟ್ವಾಳ, ಟೀಮ್ ಸತ್ಯಜಿತ್ ಸುರತ್ಕಲ್, ಬಂಟ್ವಾಳ ತಾಲೂಕು ಪ್ರಮುಖರು)
ಉಪಸ್ಥಿತರಿರಲಿದ್ದಾರೆ.
ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಪುಣ್ಯ ಪಾದಯಾತ್ರೆ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

























