ಇಂದಬೆಟ್ಟು: ಇಲ್ಲಿಯ ಕಜೆ ಎಂಬಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಸಂಭವಿಸಿದ ಅವಘಡದಲ್ಲಿ ಖಾಸಗಿ ಗುತ್ತಿಗೆ ಕಂಪನಿಯೊಂದರ ನೌಕರ ಮೃತಪಟ್ಟ ಘಟನೆ ಜ.8ರಂದು ನಡೆದಿದೆ.
ಮೃತ ವ್ಯಕ್ತಿ ಪುಂಜಾಲಕಟ್ಟೆಯ ಎನ್ ಸಿ ರೋಡ್ ನಿವಾಸಿ ಅಕ್ಟರ್ ಅಲಿ (22ವ) ಗುರುತಿಸಲಾಗಿದೆ. ವಿದ್ಯುತ್ ಕಂಬದ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.


























