ವಿಟ್ಲ: ಚಂದಳಿಕೆ ನಿವಾಸಿ, ಹಿರಿಯ ಟೈಲರ್ ಹಾಗೂ ಸಂಘಟನಾ ಕಾರ್ಯಕರ್ತರಾದ ಸಂಜೀವ ಮಡಿವಾಳ ಚಂದಳಿಕೆ (73) ಅವರು ಅನಾರೋಗ್ಯದಿಂದ ನಿಧನರಾದರು
ಇವರು ಕಳೆದ 45 ವರ್ಷಗಳ ಕಾಲ ವಿಟ್ಲ ಪಟ್ಟಣದಲ್ಲಿ ಟೈಲರ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಸೌಜನ್ಯ ಹಾಗೂ ಶ್ರಮದಿಂದ ಸಮಾಜದಲ್ಲಿ ಗೌರವ ಪಡೆದಿದ್ದರು.
ಉರಿಮಜಲು ರಾಮ್ ಭಟ್ ಅವರೊಂದಿಗೆ ಜನ ಸಂಘದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದು, ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲೂ ಸಕ್ರಿಯರಾಗಿದ್ದರು.
ಅವರಿಗೆ ಮೂರು ಪುತ್ರರು ಇದ್ದು, ಸೊಸೆಯವರು ಪಟ್ಟಣ ಪಂಚಾಯತ್ ಸದಸ್ಯರಾಗಿದ್ದಾರೆ. ಪುತ್ರರಾದ ಸುಶಾಂತ್ ಅವರು ಪುತ್ತೂರು ಗ್ರಾಮಾಂತರ ಮಂಡಲದ ಸಾಮಾಜಿಕ ಪ್ರಕೋಷ್ಟದ ಸಹ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಜೀವ ಮಡಿವಾಳ ಚಂದಳಿಕೆ ಅವರ ನಿಧನ ಸುದ್ದಿ ತಿಳಿದ ತಕ್ಷಣ ಇಂದು ಪುತ್ತೂರು ಮಾಜಿ ಶಾಸಕರಾದ ಸಂಜೀವ ಮಠo ದೂರು , ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವಾರು ಗಣ್ಯರು ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಅವರ ನಿಧನಕ್ಕೆ ವಿವಿಧ ಸಂಘಟನೆಗಳು, ಸಾರ್ವಜನಿಕರು ಹಾಗೂ ಬಂಧುಬಳಗ ತೀವ್ರ ಸಂತಾಪ ಸೂಚಿಸಿದ್ದಾರೆ.



























