ಕಡಬ: ಕಡಬ ತಾಲೂಕಿನ ಪಾಲ್ತಾಡು ಗ್ರಾಮದ ನಿವಾಸಿ ಜಗದೀಶ (28) ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ, ಹಲ್ಲೆ ಹಾಗೂ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ.
ದಿನಾಂಕ 16-01-2026ರಂದು ರಾತ್ರಿ ಸುಮಾರು 10.00ರಿಂದ 10.30ರ ಮಧ್ಯೆ ಕಡಬ ಗ್ರಾಮದ ಕಳಾರದಲ್ಲಿರುವ ಸುರಭಿ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಜಗದೀಶ ಅವರು ಊಟ ಮುಗಿಸಿ ಕ್ಯಾಶ್ ಕೌಂಟರ್ ಬಳಿ ನಿಂತಿದ್ದ ವೇಳೆ, ಪರಿಚಯಸ್ಥರಾದ ಅಜಯ್, ಬೇಬಿ ಮತ್ತು ಅನಿಲ್ ಎಂಬವರು ವಿನಾಕಾರಣ ಜಗಳ ಆರಂಭಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಜಾತಿ ನಿಂದನೆ ಮಾಡುತ್ತಾ ಕೈಯಿಂದ ಕೆನ್ನೆ, ತಲೆ, ಭುಜ ಹಾಗೂ ಬೆನ್ನಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಸಂಖ್ಯೆ 08/2026 ಅಡಿಯಲ್ಲಿ BNS-2023 ಕಲಂ 115(2), 352, 351(3) ಕಾಯ್ದೆ–2015ರ ಕಲಂ 3(1)(r) ಮತ್ತು 3(1)(s) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
























