ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಟಾರದ ದಾರಂದಕುಕ್ಕು, ಕಟಾರ, ಆನಡ್ಕ ಸೇರುವ ಮೂರು ರಸ್ತೆ ಮಧ್ಯೆಯಲ್ಲಿ ಬಾಳೆ ಎಲೆಯಲ್ಲಿ 25ಕ್ಕೂ ಅಧಿಕ ಲಿಂಬೆ ಹಣ್ಣಿನ ತುಂಡುಗಳು, ನಾಲೈದು ಬತ್ತಿ ಗಳು, ಸುತ್ತಲೂ ಸುರಿದ ಹೊದ್ದು,ಒಡೆದ ತೆಂಗಿನ ಕಾಯಿಗಳು ಜ.18ರಂದು ಬೆಳಗ್ಗೆ ಕಂಡು ಬಂದಿದು, ಇದು ವಾಮಾಚಾರ ಪ್ರಯೋಗವಾಗಿರಬಹುದೇ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಳ್ಳಿಪ್ಪಾಡಿ ಗ್ರಾಮದ ಕಟಾರದಲ್ಲಿರುವ ಅರಣ್ಯ ಜಾಗದಲ್ಲಿ ಇದು ಕಂಡು ಬಂದಿದೆ. ರಾತ್ರೋರಾತ್ರಿ ಯಾರೋ ಮೂರು ಮಾರ್ಗ ಸೇರುವಲ್ಲಿ ವಾಮಾಚಾರ ಮಾಡಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.ಬೆಳಗ್ಗೆ ಹಾಲಿನ ಡೈರಿಗೆ ಹೋಗುವವರಿಗೆ ದಾರಂದಕುಕ್ಕು, ಕಟಾರ ಮತ್ತು ಆನಡ್ಕ ಸೇರುವ ಮೂರು ಮಾರ್ಗದ ಮಧ್ಯೆ ಇದು ಗಮನಕ್ಕೆ ಬಂದಿದೆ.ವಿಚಾರ ತಿಳಿಯುತ್ತಲೇ ಸ್ಥಳದಲ್ಲಿ ಹಲವರು ಕುತೂಹಲದೊಂದಿಗೆ ಸೇರಿದ್ದರು.
























