ಬೆಳ್ಳಾರೆ ಸಮೀಪದ ಕಲ್ಲೋಣಿ ತಿರುವಿನಲ್ಲಿ ಬೈಕ್ ಮೋರಿಯಿಂದ ಕೆಳಗೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು ಸಹಸವಾರ ಗಂಭೀರ ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ.
ಮೃತರನ್ನು ಕಡಬದ ಮರ್ದಾಳದವರೆಂದು ತಿಳಿದು ಬಂದಿದೆ.
ಶಬರಿಮಲೆ ಪ್ರಸಾದವನ್ನು ಸುಳ್ಯದ ಕಡೆಗೆ ತಲುಪಿಸಲು ತಂದೆ, ಮಗ ಬೈಕಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಸಹಸವಾರನನ್ನು ಚಿಕಿತ್ಸೆಗಾಗಿ ಸುಳ್ಯಕ್ಕೆ ಆಂಬುಲೆನ್ಸ್ ಮೂಲಕ ಕರೆದೊಯ್ಯಲಾಗಿದೆ ಎನ್ನಲಾಗಿದೆ.
ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.

























