ನಾಳೆ ದಿನಾಂಕ 21/01/2026 ರಂದು ವಿಟ್ಲದಲ್ಲಿ ನಡೆಯಲಿರುವ ಮಹಾ ರಥೋತ್ಸವದ ಪ್ರಯುಕ್ತ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.
ಪಾರ್ಕಿಂಗ್ ವಿವರಗಳು ಹೀಗಿವೆ:
- ಕೇರಳ, ಸಾರಡ್ಕ, ಪೆರುವಾಯಿ, ಪುಣಚ, ಕನ್ಯಾನ ಕಡೆಯಿಂದ ಬರುವ ಭಕ್ತಾದಿಗಳು
ಬಾಕಿ ಮಾರು ಗದ್ದೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ವಾಹನ ಪಾರ್ಕಿಂಗ್ ಸ್ಥಳವನ್ನು ಬಳಸಿಕೊಳ್ಳಬಹುದು. - ಸಾಲೆತ್ತೂರು, ಕುಡ್ತಮುಗೇರು ಕಡೆಯಿಂದ ಬರುವ ಭಕ್ತಾದಿಗಳು
ವಿಟ್ಲ ಮಾದರಿ ಶಾಲಾ ವಠಾರ ಹಾಗೂ ಕಾಲೇಜು ಮೈದಾನದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. - ಪುತ್ತೂರು, ಕಂಬಳಬೆಟ್ಟು, ಕುಂಡಡ್ಕ ಕಡೆಯಿಂದ ಬರುವ ಭಕ್ತಾದಿಗಳು
ತಮ್ಮ ವಾಹನಗಳನ್ನು ವಿಟ್ಲ ಮೇಗಿನಪೇಟೆಯ ಬ್ರೈಟ್ ಆಡಿಟೋರಿಯಂನಲ್ಲಿ ಪಾರ್ಕ್ ಮಾಡುವಂತೆ ಸೂಚಿಸಲಾಗಿದೆ.
ಇದಲ್ಲದೆ, ನಾಳೆ ದಿನ *ವಿಟ್ಲ ಬಿಎಸ್‌ಎನ್‌ಎಲ್ ಆಫೀಸ್ ಕಡೆಯಿಂದ, *ಬೊಬ್ಬೆಕೇರಿ ರಸ್ತೆ ಹಾಗೂ ವಿಟ್ಲ ಕ್ವಾಲಿಟಿ ಬೇಕರಿ ಕಡೆಯಿಂದ ಹೋಗುವ ರಸ್ತೆಗಳಲ್ಲಿ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ.
ಭಕ್ತಾದಿಗಳು ಸಂಚಾರ ನಿಯಮಗಳನ್ನು ಪಾಲಿಸಿ ಸಹಕರಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
























