ಕೇರಳದಲ್ಲಿ ಇದೀಗ ಪುರುಷರು ಬಸ್ ಗಳಲ್ಲಿ ಮಹಿಳೆಯರಿಂದ ತಪ್ಪಿಸಿಕೊಳ್ಳು ಹೊಸ ಐಡಿಯಾ ಒಂದನ್ನು ಕಂಡು ಹಿಡಿದಿದ್ದಾರೆ. ಈ ಹೊಸ ಐಡಿಯಾ ಇದೀಗ ಕೇರಳದಲ್ಲಿ ಟ್ರೆಂಡ್ ಸೃಷ್ಠಿಸಿದ್ದು, ಬಸ್ ನಲ್ಲಿ ಸಂಚರಿಸುವ ಎಲ್ಲಾ ಪುರುಷರು ಇದನ್ನೇ ಬಳಸಿ ಎಂದು ಕರೆ ನೀಡಿದ್ದಾರೆ.
ಕೇರಳದ ಕೋಝಿಕ್ಕೋಡ್‌ನ ಇತ್ತೀಚೆಗೆ ಯುವತಿಯೊಬ್ಬಳು ರಶ್ ಇದ್ದ ಬಸ್ ನಲ್ಲಿ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ವಿಡಿಯೋ ಮಾಡಿ ವೈರಲ್ ಮಾಡಿದ್ದಳು. ಈ ವಿಡಿಯೋ ವೈರಲ್ ಆದ ಬೆನಲ್ಲೆ ವಿಡಿಯೋದಲ್ಲಿದ್ದ ಯುವಕ ದೀಪಕ್ ಎಂಬಾತ ಅವಮಾನ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದ, ಬಳಿಕ ಕೇರಳದಲ್ಲಿ ಯುವತಿಯ ವಿರುದ್ದ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಆಕೆಯ ಮೇಲೆ ಎಫ್ ಐಆರ್ ಕೂಡ ದಾಖಲಾಗಿದೆ. ಅಲ್ಲದೆ ವಿಡಿಯೋದಲ್ಲಿ ಎಲ್ಲೂ ದೀಪಕ್ ಆಕೆಗೆ ಉದ್ದೇಶಪೂರ್ವಕವಾಗಿ ಮುಟ್ಟಿರುವಂತೆ ಕಾಣಿಸಿಲ್ಲ. ಇದು ಆಕೆ ಕೇವಲ ವೀವ್ಸ್ ಮತ್ತು ಲೈಕ್ಸ್ ಗೋಸ್ಕರ್ ಮಾಡಿದ್ದಾಳೆ ಎಂಬ ಆಕ್ರೋಶ ಇದೀಗ ಕೇಳಿ ಬಂದಿದೆ.
ಈ ನಡುವೆ ಈ ಘಟನೆಗೆ ಕೇರಳದಲ್ಲಿ ವಿವಿಧ ರೀತಿಯಲ್ಲಿ ಮೀಮ್ಸ್ ಗಳ ವಿಡಿಯೋಗಳು ಟ್ರೆಂಡ್ ಆಗಲು ಪ್ರಾರಂಭಿಸಿದೆ. ಪುರುಷರು ಘಟನೆಯನ್ನು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇರಳದಲ್ಲಿ ಪುರುಷರಿಗೂ ರಕ್ಷಣೆ ನೀಡಬೇಕೆಂದು ಒತ್ತಾಯಿಸುವ ಧ್ವನಿ ಕೇಳಿಬರುತ್ತಿದೆ. ಈ ಸಂಬಂಧ ಇನ್‌ಸ್ಟಾಗ್ರಾಮ್ ವೀಡಿಯೊಗಳು ವೈರಲ್ ಆಗುತ್ತಿವೆ. ಬಸ್ ನಲ್ಲಿ ಸಂಚರಿಸುವ ವೇಳೆ ಮಹಿಳೆಯರು ಹತ್ತಿರ ಬಾರದಂತೆ ಪುರುಷರು ಕಾರ್ಡ್‌ಬೋರ್ಡ್ ಪೆಟ್ಟಿಗೆಗಳನ್ನು ಅಂಟಿಸಿಕೊಂಡು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ.
ಕೆಲವು ವಿಡಿಯೋಗಳಲ್ಲಿ ಮನೆಯಿಂದಲೇ ಕ್ರಿಕೆಟ್ ಲೆಗ್ ಗಾರ್ಡ್ ಗಳನ್ನು ಕೈಗೆ ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಕೆಲವರು ಮೈಗೆ ಕಬ್ಬಿಣಿದ ಮುಳ್ಳುಗಳನ್ನು ಹಾಕಿಕೊಂಡು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಅಲ್ಲದೆ ಬಸ್ ಕಂಡಕ್ಟರ್ ಸ್ವತಃ ರಟ್ಟಿನ ಪೆಟ್ಟಿಗೆಯನ್ನು ಹೊತ್ತುಕೊಂಡು ಬಸ್‌ನಲ್ಲಿ ಪ್ರಯಾಣಿಸಿದ್ದಾರೆ.
ಸದ್ಯ ಕೇರಳದಲ್ಲಿ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ವಿಡಿಯೋಗಳು ಟ್ರೆಂಡ್ ಆಗಿದೆ.
























