ಬೆಳ್ತಂಗಡಿ: ಯುವಕನೋರ್ವ ಮನೆಯಲ್ಲಿಯೇ ನೇಣು
ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸಂಜೆ ಮದ್ದಡ್ಕದಲ್ಲಿ ನಡೆದಿದೆ.
ಮದ್ದಡ್ಕ ಸಹನಾ ಕ್ಲಿನಿಕ್ ವೈದ್ಯರಾದ ಹರೀಶ್ ಶೆಣೈ ರವರ ಪುತ್ರ ಹೇಮಂತ್ ಶೆಣೈ (28ವ) ಭಾನುವಾರ ಸಂಜೆ ಮನೆಯಲ್ಲಿಯೇ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ.ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

























