ವಿಟ್ಲ: ಇದೇ ಬರುವ ಫೆಬ್ರವರಿ 1 ರಂದು ಸಂಜೆ 4.30 ರಿಂದ ಯುವಕೇಸರಿ ಅಬೀರಿ – ಅತಿಕಾರಬೈಲು (ರಿ ), ಚಂದಳಿಕೆ ಸಂಘಟನೆಯ ವತಿಯಿಂದ 11 ನೇ ವರ್ಷದ ವಾರ್ಷಿಕೋತ್ಸವವು ವಿಟ್ಲ ಸಮೀಪದ ಚಂದಳಿಕೆ ಶಾಲೆಯಲ್ಲಿ ನಡೆಯಲಿದೆ. ಸಂಜೆ 4 ಕ್ಕೆ ಚೌಕಿ ಪೂಜೆ, 4.30 ಕ್ಕೆ ಬಪ್ಪನಾಡು ಮೇಳದವರಿಂದ “ಸ್ವಾಮಿ ಭಕ್ತೆ ಮಂಜಣ್ಣೆ” ಕಾಲಮಿತಿ ತುಳು ಯಕ್ಷಗಾನ. ಸಂಜೆ 7 ಕ್ಕೆ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ, 7.30 ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ, 8 ಗಂಟೆಗೆ ಯಕ್ಷಗಾನ ಪುನರಾoಭಗೊಂಡು ರಾತ್ರಿ ಗಂಟೆ 10 ಕ್ಕೆ ಯಕ್ಷಗಾನ ಮುಕ್ತಯಾಗೊಳ್ಳಲಿದೆ.
ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕೇಸರಿ ಸಂಘದ ಅಧ್ಯಕ್ಷ ಶ್ರೀ ವನಿತ್ ಕುಮಾರ್ ಡೆಪ್ಪಿನಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ನ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶ್ರೀ ದಯಾನಂದ ಶೆಟ್ಟಿ ಉಜಿರೆಮಾರು, SLV ಗ್ರೂಪ್ ಇದರ ಆಡಳಿತ ನಿರ್ದೇಶಕರಾದ ಶ್ರೀ ದಿವಾಕರ್ ದಾಸ್ ನೆರ್ಲಾಜೆ, ದಿಗ್ವಿಜಯ ಗ್ರೂಪ್ ಇದರ ಚಯರ್ಮೆನ್ ಶ್ರೀ ದಿನಕರ ಭಟ್ ಮಾವೆ, ಉದ್ಯಮಿಗಳಾದ ಶ್ರೀ ಸುಬ್ರಾಯ ಪೈ ಮತ್ತು ಶ್ರೀ ಬಾಬು ಕೊಪ್ಪಳ, ಪಟ್ಟಣ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಕರುಣಾಕರ ಗೌಡ, ಪಟ್ಟಣ ಪಂಚಾಯತ್ ಸದಸ್ಯರಾದ ಶ್ರೀಮತಿ ರಕ್ಷಿತಾ ಸನತ್ ಸಾಲಿಯಾನ್ ಚಂದಳಿಕೆ, ಒಜಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಶ್ರೀಮತಿ ನೇತ್ರಾವತಿ ಟೀಚರ್ ನಿಡ್ಯ, ಚಂದಳಿಕೆ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸುಮತಿ ದೇಜಪ್ಪ ಪೂಜಾರಿ ಮತ್ತು ಸಮರ್ಪಣ ವಿಟ್ಲ ಇದರ ಅಧ್ಯಕ್ಷರಾದ ಶ್ರೀ ಯಶವಂತ ಪೂಜಾರಿ ನಿಡ್ಯ ಭಾಗವಹಿಸಲಿದ್ದಾರೆ. ಅಲ್ಲದೆ ಇದೇ ವೇದಿಕೆಯಲ್ಲಿ ಸೇವಾ ಕಾರ್ಯದಲ್ಲಿ ಸಾಧನೆ ಮಾಡಿರುವ ಶ್ರೀ ಧನಂಜಯ ವಿಟ್ಲ, ರಾಷ್ಟ್ರೀಯ ಈಜು ಪಟು ಶ್ರೀಲಕ್ಷ್ಮೀ ಗಾಣಿಗ ವಿಟ್ಲ ಮತ್ತು ರಾಷ್ಟ್ರೀಯ ಕಬ್ಬಡಿ ಪಟು ತೀರ್ಥಶ್ ವಿಟ್ಲ ಇವರುಗಳ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಯುವಕೇಸರಿಯ ಪ್ರಧಾನ ಕಾರ್ಯದರ್ಶಿ ಶ್ರೀ ಬಾಲಕೃಷ್ಣ ಪಟ್ಲ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























