ಪುತ್ತೂರು: ಪರ್ಲಡ್ಕ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ಆರ್.ಆರ್ ಮೋಟಾರ್ ವರ್ಕ್ಸ್ ಎಂಬ ಗ್ಯಾರೇಜ್ ಬಳಿ ಗ್ಯಾರೇಜ್ ಮಾಲಕ ಮತ್ತು ವ್ಯಕ್ತಿಯೊಬ್ಬರ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರ್ಲಡ್ಕ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ಆರ್.ಆರ್.ಮೋಟಾರ್ ವರ್ಕ್ಸ್‌ನ ಮಾಲಕ ಬಲ್ನಾಡು ನಿವಾಸಿ ರಮೇಶ್ ಆಚಾರ್ಯ ಅವರು ಈ ಕುರಿತು ದೂರು ನೀಡಿದ್ದಾರೆ.
‘ಜ.27ರಂದು ನಾನು ಗ್ಯಾರೇಜ್ ತೆರೆಯುತ್ತಿದ್ದ ವೇಳೆ ಇನ್ನೋವ ಕಾರಿನಲ್ಲಿ ಬಂದ ರಮೇಶ್ ನಾಯ್ಕ ಎಂಬವರು ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದ್ದಾರೆ. ಇನ್ನೋದ ಕಾರಿನ ಕ್ಯಾರಿಯರ್ ಮಾರಾಟ ಮಾಡಿದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಈ ಕೃತ್ಯ ನಡೆದಿರುವುದಾಗಿ’ದೂರಿನಲ್ಲಿ ಅವರು ತಿಳಿಸಿದ್ದಾರೆ.

























