ಪುತ್ತೂರು: 2 ತಿಂಗಳ ಹಿಂದೆ ಬದಿಯಡ್ಕದಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬನ್ನೂರು ಕರ್ಮಲ ನಿವಾಸಿ ಪಂಚಾಕ್ಷರಿ ಲೈಟಿಂಗ್ಸ್‌ನ ಮಾಲಕ ಗಣೇಶ್ ಗೌಡ ಫೆ.3ರಂದು ಬೆಳಗ್ಗೆ ನಿಧನರಾದರು.
ಡಿ.6ರಂದು ಲೈಟಿಂಗ್ಸ್ ವಿಚಾರದಲ್ಲಿ ಡಿ.6ರಂದು ಬದಿಯಡ್ಕಕ್ಕೆ ಹೋದ ಅವರು ಸ್ಕೂಟರ್ ಅಪಘಾತಗೊಂಡು ತೀವ್ರ ಗಾಯಗೊಂಡಿದ್ದರು.
ಅವರನ್ನು ಸ್ಥಳೀಯರು ಸೇರಿ ಕಾಸರಗೋಡು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಫೆ.3ರಂದು ಬೆಳಗ್ಗೆ ನಿಧನರಾದರು. ಮೃತರು ಪತ್ನಿ, ಪುತ್ರರಾದ ಪ್ರದೀಪ್ ಮತ್ತು ಧನಂಜಯ ಅವರನ್ನು ಅಗಲಿದ್ದಾರೆ.

























