ಪೆರುವಾಜೆ : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ಮುಂದಿನ ಮೂರು ವರ್ಷಗಳ ಅವಧಿಗೆ 9 ಮಂದಿ ವ್ಯವಸ್ಥಾಪನ ಸದಸ್ಯರನ್ನು ನೇಮಕಗೊಳಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.
ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್, ಸುನಿಲ್ ರೈ ಪೆರುವಾಜೆ, ಶೇಷಪ್ಪ ನಾಯ್ಕ ಮಠತ್ತಡ್ಕ, ನಿರ್ಮಲಾ ರೈ ಕೆಡೆಂಜಿಮೊಗರು, ಸುಂದರಿ ಬೊಟ್ಟತ್ತಾರು, ದೀಪಕ್ ಶೆಟ್ಟಿ ದೋಳ, ಪ್ರಮೋದ್ ಕುಮಾರ್ ವೈಪಾಲ, ಕಿಶೋರ್ ಕುಮಾರ್ ಪಿ., ಅಜಯ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.


























