ಕಾಸರಗೋಡು: ಜನಪ್ರಿಯ ಸೋಷಿಯಲ್ ಮೀಡಿಯ ಇನ್ಫ್ಲುಎನ್ಸರ್ ಆಡೂರ್ ಮೂಲದ ಚಿನ್ನು ಪಾಪು (ರೇಶ್ಮಾ 24) ಕಾಸರಗೋಡು ನಗರ ಹೊರ ವಲಯದ ಉಳಿಯತ್ತಡ್ಕದ ಅಪಾರ್ಟ್ ಮೆಂಟ್ ವೊಂದರಲ್ಲಿ ಸೋಮವಾರ ಮಧ್ಯಾಹ್ನ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರೇಶ್ಮಾ ಅವರ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಸೋಮವಾರ ಮಧ್ಯಾಹ್ನ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಈಕೆಯನ್ನು ಸ್ಥಳಿಯರು ಆಸ್ಪತ್ರೆಗೆ ತಲುಪಿಸಿದರೂ ಅದಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಚಿನ್ನು ಪಾಪು ಎಂದೇ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಕಾಣಿಸಿಕೊಂಡು ಕಾಸರಗೋಡು ಭಾಷೆಯಲ್ಲೇ ಮಾತನಾಡಿ ಜನಪ್ರಿಯತೆ ಪಡೆದಿದ್ದ ಈಕೆಗೆ 2 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದರು. ರೇಶ್ಮಾ ಈ ಮೊದಲೇ ವಿವಾಹಿತಳಾಗಿದ್ದು, ಒಂದು ಮಗುವನ್ನೂ ಹೊಂದಿದ್ದ ಈಕೆ ಪತಿಯಿಂದ ವಿಚ್ಛೇದಿತಳಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಸಾಮಾಜಿಕ ಜಾಲತಾಣದ ಪ್ರಭಾವೀ ವೇದಿಕೆಯಲ್ಲಿ ಕಾಣಿಸಿಕೊಂಡು ಅಪಾರ ವೀಕ್ಷಕರನ್ನು ಹೊಂದಿದ್ದ ಈಕೆಯ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ರೇಶ್ಮಾಳ ಮೊಬೈಲ್ ನ್ನು ತಪಾಸಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

























