ಮಂಗಳೂರು: ನಗರದ ಸುರತ್ಕಲ್‌ನಲ್ಲಿರುವ ಮುಕ್ಕ ಕಾಲೇಜಿನಲ್ಲಿ ಕ್ರಿಮಿನಾಲಜಿ ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬಳು ಅನ್ಯಕೋಮಿನ ಯುವಕನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.
ಕಾಸರಗೋಡು ಆರ್.ಡಿ. ನಗರದ ಮೀಪುಗುರಿ ನಿವಾಸಿ ವೈಶಾಲಿ(23) ಎಂಬಾಕೆ ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಕ್ರಿಮಿನಾಲೊಜಿ ವ್ಯಾಸಂಗ ಮಾಡುತ್ತಿದ್ದಳು. ಈಕೆ ಕಾನಾದ ಡಾ. ಸುರೇಶ್ ಎಂಬವರ ಪಿಜಿಯಲ್ಲಿ ವಾಸ್ತವ್ಯವಿದ್ದಳು. 2026ನೇ ಜನವರಿಯಿಂದ ಈಕೆ ಸುರತ್ಕಲ್‌ನ Fly Qube ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು.
ಫೆ.7ರಂದು ವೈಶಾಲಿಯು ಮೊಹಮ್ಮದ್ ಮಿದ್ಲಾಜ್ ಪಿ.ಹೆಚ್. ಎಂಬ ಅನ್ಯಕೋಮಿನ ಯುವಕನೊಂದಿಗೆ ಕೇರಳದ ವಯನಾಡ್ ರಿಜಿಸ್ಟರ್ ಆಫೀಸಿನಲ್ಲಿ ಜ.31ರಂದು ರಿಜಿಸ್ಟರ್ ಮದುವೆಯಾಗಿರುವ ಬಗ್ಗೆ ವಾಟ್ಸ್‌ಆ್ಯಪ್ ಸಂದೇಶ ವೈಶಾಲಿಯ ಸಂಬಂಧಿ ಹರಿದಾಸ್ ಎಂಬವರು ಗಮನಿಸಿದ್ದರು.
ಆ ಸಂದೇಶವನ್ನು ಅವರು ವೈಶಾಲಿಯ ಹೆತ್ತವರಿಗೆ ಕಳುಹಿಸಿಕೊಟ್ಟಿದ್ದರು. ಆದ್ದರಿಂದ ಅವರು ಪುತ್ರಿಗೆ ಕರೆ ಮಾಡಿ ಮಾತನಾಡಿದ್ದು, ಬಳಿಕ ಮತ್ತೊಮ್ಮೆ ಫೋನ್ ಮಾಡಿದಾಗ ವೈಶಾಲಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದೀಗ ಆಕೆ ಫೆ.8ರಿಂದ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಜೊತೆಗೆ ಆಕೆ ವಾಸ್ತವ್ಯವಿರುವ ಪಿಜಿ ಮನೆಯವರು ಬಂದು ನೋಡಿದಾಗ ಪುತ್ರಿ ರೂಮಿನಲಿ ಇರಲಿಲ್ಲ.
ಆದ್ದರಿಂದ ಮನೆಯ ಮಾಲಕರ ಸಿಸಿ ಕ್ಯಾಮರಾ ಪರಿಶೀಲಿಸಿಕೊಂಡಾಗ ಫೆ.9ರಂದು ಪಿಜಿಯಿಂದ ತೆರಳಿರುವುದು ಕಂಡು ಬಂದಿದೆ. ಆದ್ದರಿಂದ ಪೊಲೀಸರು ಆಕೆ ಈವರೆಗೂ ಮಗಳು ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ ಆದುದರಿಂದ ಕಾಣೆಯಾದ ಆಕೆಯನ್ನು ಪತ್ತೆ ಮಾಡಿಕೊಡಬೇಕಾಗಿ ಹೆತ್ತವರು ಸುರತ್ಕಲ್ ಠಾಣೆಯಲ್ಲಿ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.

























