Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಭಕ್ತಾಧಿಗಳ ಸಭೆ..!!

    ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಭಕ್ತಾಧಿಗಳ ಸಭೆ..!!

    ನೆಲ್ಯಾಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು…!!!

    ನೆಲ್ಯಾಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು…!!!

    ಬಂಟ್ವಾಳದಲ್ಲಿ ನಾರಾಯಣ ಗುರು ಮಂದಿರ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ..!!

    ಬಂಟ್ವಾಳದಲ್ಲಿ ನಾರಾಯಣ ಗುರು ಮಂದಿರ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ..!!

    ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ…!!

    ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ…!!

    ಪುತ್ತೂರು: ಹವ್ಯಾಕ ಭವನದ ತಡೆಗೋಡೆ ಕುಸಿತ..!!!

    ಪುತ್ತೂರು: ಹವ್ಯಾಕ ಭವನದ ತಡೆಗೋಡೆ ಕುಸಿತ..!!!

    ಬೆಳ್ತಂಗಡಿ: ಬೈಕ್ ಅಪಘಾತ : ವಿದ್ಯಾರ್ಥಿ ಸಾವು : ಪುತ್ತೂರಿನ ಯುವಕ ಗಂಭೀರ..!!

    ಬೆಳ್ತಂಗಡಿ: ಬೈಕ್ ಅಪಘಾತ : ವಿದ್ಯಾರ್ಥಿ ಸಾವು : ಪುತ್ತೂರಿನ ಯುವಕ ಗಂಭೀರ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home VIRAL

ಪ್ರತಿಯೊಂದು ವೈರಲ್​​​ ವಿಡಿಯೋದಲ್ಲೂ ಈ ಹುಡುಗ ಇರಲೇಬೇಕು: ಬಾಲಕನ ಜೀವನ ಬದಲಾಯಿಸಿತು ಆ ಒಂದೇ ಒಂದು ನಗು…!!

February 11, 2026
in VIRAL
0
ಪ್ರತಿಯೊಂದು ವೈರಲ್​​​ ವಿಡಿಯೋದಲ್ಲೂ ಈ ಹುಡುಗ ಇರಲೇಬೇಕು: ಬಾಲಕನ ಜೀವನ ಬದಲಾಯಿಸಿತು ಆ ಒಂದೇ ಒಂದು ನಗು…!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

Advertisement
Advertisement
Advertisement

ಸೋಶಿಯಲ್​​ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಈ ಹುಡುಗನ ವಿಡಿಯೋ ಸಖತ್​​​ ವೈರಲ್​ ಆಗುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಚಿಕ್ಕ ವಿಷಯವು ದೊಡ್ಡದಾಗಿ ವೈರಲ್​ ಆಗುತ್ತದೆ. ಎಲ್ಲ ಮೀಮ್ಸ್​​​​​​ಗಳಲ್ಲಿ ಈ ಹುಡುಗನ ವಿಡಿಯೋವನ್ನು ನೋಡಿರಬಹುದು. ಟೀ ಹಿಡಿದುಕೊಂಡು ನಗುವ ನಗು ಇದೀಗ ದೇಶದಲ್ಲಿ ದೊಡ್ಡ ಸದ್ದು ಮಾಡಿದೆ. ಅಷ್ಟಕ್ಕೂ ಈ ಹುಡುಗ ಯಾರು ಗೊತ್ತಾ? ಸೋಷಿಯಲ್ ಮೀಡಿಯಾದಲ್ಲಿ ಇಂದು ಪ್ರತಿಯೊಂದು ಮೀಮ್ ಅಥವಾ ಟ್ರೋಲ್ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುವ ಆ ಪ್ರಸಿದ್ಧ ನಗುಮೊಗದ ಚಹಾ ಹುಡುಗನ ಕಥೆ ನಿಜಕ್ಕೂ ಸ್ಫೂರ್ತಿದಾಯಕ. ಆತನ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

ಈ ವೈರಲ್ ಹುಡುಗನ ಹೆಸರು ಅರುಣ್. ಈತ ನಮ್ಮ ಪಕ್ಕದ ತೆಲಂಗಾಣ ರಾಜ್ಯದ ಜಯಶಂಕರ್ ಬೊಪ್ಪಳಪಲ್ಲಿ ಜಿಲ್ಲೆಯ ನಾಲಪ್ಪುಚಟುವಲ್ಲಿ ಗ್ರಾಮದವನು. ಅತ್ಯಂತ ಬಡತನದ ಕುಟುಂಬದಿಂದ ಬಂದ ಅರುಣ್, ಜೀವನೋಪಾಯಕ್ಕಾಗಿ ಲಾರಿಯಲ್ಲಿ ಕ್ಲೀನರ್ (ಸಹಾಯಕ) ಆಗಿ ಕೆಲಸ ಮಾಡುತ್ತಿದ್ದಾನೆ. ಈ ವಿಡಿಯೋ ಯಾವುದೇ ಪ್ಲಾನಿಂಗ್ ಮಾಡಿ ಮಾಡಿದ್ದಲ್ಲ, ಬದಲಾಗಿ ಅದೊಂದು ಆಕಸ್ಮಿಕ ಸುಂದರ ಕ್ಷಣ, ಲಾರಿ ಚಾಲಕ ನೆಹರು ಅವರು ಚಹಾ ಕುಡಿಯುವಾಗ ಒಂದು ಜೋಕ್ ಹೇಳುತ್ತಾರೆ. ಅದನ್ನು ಕೇಳಿ ಅರುಣ್ ತನ್ನ ಮುಗ್ಧತೆಯಿಂದ ಗಹಗಹಿಸಿ ನಗುತ್ತಾನೆ.

Advertisement

ಅರುಣ್ ನಗುವನ್ನು ನೆಹರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅಪ್‌ಲೋಡ್ ಆದ ಕೇವಲ ಒಂದೂವರೆ ತಿಂಗಳಲ್ಲೇ ಈ ವಿಡಿಯೋ 40 ಮಿಲಿಯನ್ (4 ಕೋಟಿ) ವೀಕ್ಷಣೆಗಳನ್ನು ದಾಟಿ ದಾಖಲೆ ಬರೆಯಿತು. ಅರುಣ್ ಬಡತನದ ಕಾರಣದಿಂದ ಕೇವಲ 4ನೇ ತರಗತಿಗೆ ಶಾಲೆಯನ್ನು ಅರ್ಧಕ್ಕೆ ಬಿಟ್ಟಿದ್ದನು. ಆದರೆ, ಈ ವಿಡಿಯೋ ವೈರಲ್ ಆದ ನಂತರ ಚಾಲಕ ನೆಹರು ಅವರ ಬೆಂಬಲದಿಂದ ಅರುಣ್ ಮತ್ತೆ ಓದಿನತ್ತ ಮುಖ ಮಾಡಿದ್ದಾನೆ. ಇತ್ತೀಚಿನ ವರದಿಗಳ ಪ್ರಕಾರ, ಅರುಣ್ 10ನೇ ತರಗತಿ ಪರೀಕ್ಷೆ ಬರೆದು ಉತ್ತೀರ್ಣನಾಗಿದ್ದಾನೆ. ರಾತ್ರೋರಾತ್ರಿ ಪ್ರಸಿದ್ಧಿ ಪಡೆದ ಅರುಣ್ ಈಗ ತೆಲಂಗಾಣದಲ್ಲಿ ಸೆಲೆಬ್ರಿಟಿ. ಅನೇಕ ದೊಡ್ಡ ದೊಡ್ಡ ಯೂಟ್ಯೂಬ್ ಚಾನೆಲ್‌ಗಳು ಈತನನ್ನು ಸಂದರ್ಶನ ಮಾಡಿವೆ.

ಈಗ ಅರುಣ್ ತಾನೇ ಒಂದು ಇನ್‌ಸ್ಟಾಗ್ರಾಂ ಖಾತೆ ತೆರೆದು ಕಾಮಿಡಿ ವಿಡಿಯೋಗಳನ್ನು ಮಾಡುತ್ತಾ ಸಾವಿರಾರು ಫಾಲೋವರ್ಸ್ ಹೊಂದಿದ್ದಾನೆ. ನಗುವಿಗೆ ಜಾತಿ, ಧರ್ಮ ಅಥವಾ ಭಾಷೆಯ ಹಂಗಿಲ್ಲ ಎಂಬುದು ಅರುಣ್ ವಿಷಯದಲ್ಲಿ ಸಾಬೀತಾಗಿದೆ. ಆತನ ಮುಗ್ಧ ನಗು ಎಂತಹ ಒತ್ತಡದಲ್ಲಿರುವವರಿಗೂ ಒಂದು ಕ್ಷಣ ನಗು ತರಿಸುತ್ತದೆ. ಅದಕ್ಕಾಗಿಯೇ ಇಂದಿಗೂ ಟ್ರೋಲಿಗರು ಯಾವುದೇ ಕಾಮಿಡಿ ವಿಡಿಯೋ ಎಡಿಟ್ ಮಾಡುವಾಗ ಅರುಣ್ ನಗುವಿನ ಕ್ಲಿಪ್ ಇಲ್ಲದೆ ಪೂರ್ಣಗೊಳಿಸುವುದಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಅರುಣ್​​ ಹೀಗೆ ಹೇಳಿದ್ದಾನೆ. ಅರುಣ್ ಹೇಳುವಂತೆ, ಆತ ನಗುವಾಗ ಆತನಿಗೆ ತಾನು ಒಬ್ಬ ಬಡ ಲಾರಿ ಕ್ಲೀನರ್ ಎಂಬ ನೆನಪೇ ಇರಲಿಲ್ಲ. “ನನ್ನ ನಗು ಇಷ್ಟೊಂದು ಜನರಿಗೆ ಇಷ್ಟವಾಗುತ್ತದೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಬಡತನದ ನೋವಿನ ನಡುವೆಯೂ ಆ ಒಂದು ಕ್ಷಣದ ನಗು ನನ್ನ ಜೀವನವನ್ನೇ ಬದಲಿಸಿತು” ಎಂದು ಭಾವುಕನಾಗಿ ಹೇಳಿದ್ದಾನೆ.

ನನ್ನ ಜೀವನದಲ್ಲಿ ನೆಹರು ಅಣ್ಣ (ಲಾರಿ ಡ್ರೈವರ್) ದೇವರಿಗಿಂತ ಕಡಿಮೆ ಇಲ್ಲ. ಅವರು ಆ ವಿಡಿಯೋ ಮಾಡದಿದ್ದರೆ. ನಾನು ಓದಬೇಕು ಎಂದು ಹಠ ಹಿಡಿಯದಿದ್ದರೆ ನಾನು ಇಂದಿಗೂ ಕೇವಲ ಕ್ಲೀನರ್ ಆಗಿಯೇ ಇರುತ್ತಿದ್ದೆ. ನಾನು 10ನೇ ತರಗತಿ ಓದಲು ಅವರೇ ಕಾರಣ. ವೈರಲ್ ಆದ ಮೇಲೆ ದೊಡ್ಡ ದೊಡ್ಡ ತೆಲುಗು ನಟರು ಮತ್ತು ಯೂಟ್ಯೂಬರ್‌ಗಳು ತನ್ನನ್ನು ಗುರುತಿಸಿ ಮಾತನಾಡಿಸಿದಾಗ ಆರಂಭದಲ್ಲಿ ತುಂಬಾ ಭಯವಾಗಿತ್ತು ಎಂದು ಅರುಣ್ ನೆನಪಿಸಿಕೊಂಡಿದ್ದಾನೆ. “ಈಗ ಜನರು ನನ್ನ ಜೊತೆ ಸೆಲ್ಫಿ ಕೇಳಿದಾಗ ವಿಚಿತ್ರ ಎನಿಸಿದರೂ ಖುಷಿಯಾಗುತ್ತದೆ. ಕೇವಲ ವಿಡಿಯೋ ಮಾಡುವುದು ಮಾತ್ರವಲ್ಲ, ಚೆನ್ನಾಗಿ ಓದಿ ಗೌರವಯುತವಾದ ಕೆಲಸ ಮಾಡಬೇಕು ಮತ್ತು ತನ್ನಂತೆಯೇ ಬಡತನದಲ್ಲಿರುವ ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಹೇಳಿದರು.

Advertisement
Advertisement
Previous Post

ಆನ್‌ಲೈನ್ ಮ್ಯಾಟ್ರಿಮೋನಿ ಮೂಲಕ ಮಹಿಳೆಯರಿಗೆ ವಂಚನೆ : ಆರೋಪಿ ಅರೆಸ್ಟ್..!!

Next Post

ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ…!!!

OtherNews

ಮೊಹಮ್ಮದ್ ಫರ್ಮಾನ್ ಜೊತೆ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಮದುವೆ..!!!
Featured

ಮೊಹಮ್ಮದ್ ಫರ್ಮಾನ್ ಜೊತೆ ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಮದುವೆ..!!!

March 12, 2026
ಕೇರಳ ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಬಲಿ: ಕೊನೆಗೂ ಯೂಟ್ಯೂಬರ್ ಶಿಂಜಿತಾ ಮುಸ್ತಫಾ ಬಂಧನ..!!
Featured

ಕೇರಳ ಯುವತಿಯ ರೀಲ್ಸ್‌ ಹುಚ್ಚಿಗೆ ವ್ಯಕ್ತಿ ಬಲಿ: ಕೊನೆಗೂ ಯೂಟ್ಯೂಬರ್ ಶಿಂಜಿತಾ ಮುಸ್ತಫಾ ಬಂಧನ..!!

January 22, 2026
ಕೇರಳದ ಬಸ್ ಗಳಲ್ಲಿ ಹೊಸ ಟ್ರೆಂಡ್ – ಮಹಿಳೆಯರಿಂದ ಜೀವ ರಕ್ಷಣೆಗೆ ಪುರುಷರ ಹೊಸ ಐಡಿಯಾ..!!!!
Featured

ಕೇರಳದ ಬಸ್ ಗಳಲ್ಲಿ ಹೊಸ ಟ್ರೆಂಡ್ – ಮಹಿಳೆಯರಿಂದ ಜೀವ ರಕ್ಷಣೆಗೆ ಪುರುಷರ ಹೊಸ ಐಡಿಯಾ..!!!!

January 21, 2026
ಇದು ತಮಾಷೆಯಲ್ಲ ನೈಜ ಸಂಗತಿ : ಪುತ್ತೂರಿನ ಕಾರ್ಯಕ್ರಮದಲ್ಲಿ ಕಂಡ‌ ದೃಶ್ಯ..!!
VIRAL

ಇದು ತಮಾಷೆಯಲ್ಲ ನೈಜ ಸಂಗತಿ : ಪುತ್ತೂರಿನ ಕಾರ್ಯಕ್ರಮದಲ್ಲಿ ಕಂಡ‌ ದೃಶ್ಯ..!!

January 18, 2026
ದಂಪತಿ ಏಕಾಂತದಲ್ಲಿದ್ದಾಗ ಮಾಸ್ಟರ್ ಕೀ ಬಳಸಿ ರೂಮ್‌ಗೆ ನುಗ್ಗಿದ ಸಿಬ್ಬಂದಿ; ಹೋಟೆಲ್‌ಗೆ 10 ಲಕ್ಷ ದಂಡ..!!
VIRAL

ದಂಪತಿ ಏಕಾಂತದಲ್ಲಿದ್ದಾಗ ಮಾಸ್ಟರ್ ಕೀ ಬಳಸಿ ರೂಮ್‌ಗೆ ನುಗ್ಗಿದ ಸಿಬ್ಬಂದಿ; ಹೋಟೆಲ್‌ಗೆ 10 ಲಕ್ಷ ದಂಡ..!!

January 9, 2026
India Post Recruitment 2026: ಭಾರತೀಯ ಅಂಚೆ ಇಲಾಖೆಯಲ್ಲಿ 30,000ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ..!!
VIRAL

India Post Recruitment 2026: ಭಾರತೀಯ ಅಂಚೆ ಇಲಾಖೆಯಲ್ಲಿ 30,000ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ..!!

December 30, 2025

Leave a Reply Cancel reply

Your email address will not be published. Required fields are marked *

Recent News

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಭಕ್ತಾಧಿಗಳ ಸಭೆ..!!

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಭಕ್ತಾಧಿಗಳ ಸಭೆ..!!

March 29, 2026
ನೆಲ್ಯಾಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು…!!!

ನೆಲ್ಯಾಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು…!!!

March 29, 2026
ಬಂಟ್ವಾಳದಲ್ಲಿ ನಾರಾಯಣ ಗುರು ಮಂದಿರ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ..!!

ಬಂಟ್ವಾಳದಲ್ಲಿ ನಾರಾಯಣ ಗುರು ಮಂದಿರ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ..!!

March 29, 2026
ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ…!!

ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ…!!

March 29, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page