ಪುತ್ತೂರು ನಗರದ ಕೋರ್ಟ್ ರಸ್ತೆದಲ್ಲಿರುವ ಪ್ರಸಿದ್ಧ ರಾಧಾ’ಸ್ ಜವುಳಿ ಮಳಿಗೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಮಕ್ಕಳ ಜವುಳಿಗಳ ವಿಶೇಷ ಮತ್ತು ವಿಸ್ತೃತ ಮಳಿಗೆ ‘ಕಿಡ್ಸ್ ಫ್ಲೋರ್’ ಫೆಬ್ರವರಿ 12ರಂದು ಶುಭಾರಂಭಗೊಳ್ಳಲಿದೆ.
ಜವುಳಿ ಉದ್ಯಮದಲ್ಲಿ 30 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ರಾಧಾ’ಸ್ ಮಳಿಗೆಯು ಈಗಾಗಲೇ ಮದುವೆ ಸೀರೆಗಳ ಎಕ್ಸ್‌ಕ್ಲೂಸಿವ್ ಸಂಗ್ರಹಕ್ಕಾಗಿ ಪ್ರಸಿದ್ಧಿಯಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಎರಡನೇ ಮಹಡಿಯಲ್ಲಿ ಮದುವೆ ಸೀರೆಗಳಿಗಾಗಿ ಪ್ರತ್ಯೇಕ ಹಾಗೂ ವಿಸ್ತೃತ ವಿಭಾಗವನ್ನು ಆರಂಭಿಸಲಾಗಿತ್ತು. ಇದೀಗ ನಾಲ್ಕನೇ ಮಹಡಿಯಲ್ಲಿ ಮಕ್ಕಳ ಉಡುಪುಗಳಿಗಾಗಿ ಪ್ರತ್ಯೇಕ ‘ಕಿಡ್ಸ್ ಫ್ಲೋರ್’ ಪ್ರಾರಂಭವಾಗುತ್ತಿರುವುದು ವಿಶೇಷವಾಗಿದೆ.
ನೂತನ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
1995ರಲ್ಲಿ ಕೋರ್ಟ್ ರಸ್ತೆಯ ಸಣ್ಣ ಅಂಗಡಿಯೊಂದರಲ್ಲಿ ಆರಂಭವಾದ ರಾಧಾ’ಸ್ ಜವುಳಿ ಮಳಿಗೆಯು ಪುತ್ತೂರು ಜನತೆಯ ಅಗತ್ಯತೆಗಳಿಗೆ ಅನುಗುಣವಾಗಿ ಉತ್ತಮ ಸೇವೆ ನೀಡುತ್ತಾ ಹಂತ ಹಂತವಾಗಿ ಬೆಳವಣಿಗೆ ಸಾಧಿಸಿದೆ. 2005ರಲ್ಲಿ ಮಳಿಗೆಯನ್ನು ವಿಸ್ತರಿಸಿ ಅದೇ ಕಟ್ಟಡದ ಮೇಲಂತಸ್ತಿನಲ್ಲಿ ಹೊಸ ವಿಭಾಗವನ್ನು ಆರಂಭಿಸಲಾಗಿತ್ತು. 2012ರಲ್ಲಿ ವಿಶ್ವತ ಮಳಿಗೆಯನ್ನು ಪ್ರಾರಂಭಿಸುವ ಮೂಲಕ ಇನ್ನಷ್ಟು ಸೇವಾ ವ್ಯಾಪ್ತಿಯನ್ನು ವಿಸ್ತರಿಸಿತು.
ಪ್ರಸ್ತುತ ಮೂರು ಅಂತಸ್ತುಗಳ ಮಳಿಗೆಯಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳ ಉಡುಪುಗಳ ಪ್ರತ್ಯೇಕ ವಿಭಾಗಗಳೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಹೆಸರು ಮಾಡಿದ ರಾಧಾ’ಸ್ ಮಳಿಗೆಯು ಇದೀಗ ಮಕ್ಕಳ ಜವುಳಿಗಳು ಮತ್ತು ಸೀರೆಗಳ ವಿಸ್ತೃತ ಸಂಗ್ರಹವನ್ನು ಒಂದೇ ಸೂರಿನಡಿ ಒದಗಿಸುತ್ತಿದ್ದು, ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಮದುವೆ ಸೀರೆಗಳ ವಿಶೇಷ ಸಂಗ್ರಹ ಹೊಂದಿರುವ ರಾಧಾ’ಸ್ ಮಳಿಗೆಯಲ್ಲಿ ಪ್ರತಿದಿನ ಹೊಸ ಮಾದರಿಯ ಮದುವೆ ಜವುಳಿಗಳು ಲಭ್ಯವಿದ್ದು, ಪುತ್ತೂರಿನ ಪ್ರಮುಖ ಜವುಳಿ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತಯಾರಾಗುವ ಎಲ್ಲಾ ಮಾದರಿಯ ಸೀರೆಗಳು ಇಲ್ಲಿ ದೊರೆಯುತ್ತವೆ.
ಮಳಿಗೆಯಲ್ಲಿ ಕನಿಷ್ಠ ರೂ.195ರಿಂದ ಪ್ರಾರಂಭವಾಗಿ ಗರಿಷ್ಠ ರೂ.40,000ರವರೆಗೆ ಬೆಲೆಯ ಸೀರೆಗಳು ಲಭ್ಯವಿದ್ದು, ರೇಷ್ಮೆ ಸೀರೆಗಳಂತಹ ಬೆಲೆಬಾಳುವ ಸಂಗ್ರಹವೂ ಇದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.


























