ಸುಳ್ಯ: ಯುವಕನೋರ್ವನ ಮೃತದೇಹ ಶೌಚಾಲಯದೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ಸಂಜೆ ಗುತ್ತಿಗಾರು ಗ್ರಾಮದ ಅಡ್ಡನಪಾರೆಯಿಂದ ವರದಿಯಾಗಿದೆ.
ಅಡ್ಡನಪಾರೆ ಗೋಪಾಲ ನಾಯ್ಕ ಎಂಬವರ ಪುತ್ರ ಮಹಾಬಲ ಎಂಬವರೇ ಮೃತ ವ್ಯಕ್ತಿ.
ಅವರು ಫೆ.4ರಂದು ರಾತ್ರಿ ಅಮಲು ಪದಾರ್ಥ ಸೇವಿಸಿ, ಮನೆಗೆ ಬಂದು ತನ್ನ ಮನೆಗೆ ಬೆಂಕಿ ಹಚ್ಚಿ ಅಲ್ಲಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ. ಮನೆಗೆ ಬೆಂಕಿ ಹಚ್ಚಿದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅವರ ತಂದೆ ಗೋಪಾಲ ನಾಯ್ಕ ಅವರು ದೂರು ನೀಡಿದ್ದರು.

























