ಏನೆಕಲ್ಲು ಗ್ರಾಮದ ಪದ್ಮಡ್ಕ ದಿ. ಶೀನಪ್ಪ ಗೌಡ ಮತ್ತು ಶ್ರೀಮತಿ ಜಯಂತಿ ದಂಪತಿಗಳ ಪುತ್ರ ಸುಜಿತ್ ರವರು ಅಲ್ಪ ಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಫೆ.13 ರಂದು ನಿಧನರಾದರು.
ಅವರಿಗೆ 27 ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯ ಸಂಸ್ಕಾರ ಅವರ ತಾಯಿ ತವರು ಮನೆಯಾದ ಕೂತ್ಕುಂಜ ಗ್ರಾಮದ ಚಿದ್ದಲ್ಲು ದಾಮೋದರ ಗೌಡರ ಮನೆಯಲ್ಲಿ ನಡೆಸಲಾಯಿತು.
ಮೃತರು ಅವಿವಾಹಿತರಾಗಿದ್ದು. ತಾಯಿ, ಸಹೋದರರಾದ ರೋಹಿತ್ ಮೋಕ್ಷಿತ್, ಕುಟುಂಬಸ್ಥರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

























