ಪುತ್ತೂರು : ನಗರ ಯೋಜನಾ ಪ್ರಾಧಿಕಾರ ಪುತ್ತೂರು ಹಾಗೂ ನಗರಸಭೆ ಪುತ್ತೂರು ಇವರ ಸಹಯೋಗದಲ್ಲಿ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ನೂತನ ಧ್ವಜಸ್ತಂಭದ ಉದ್ಘಾಟನಾ ಸಮಾರಂಭವು ಫೆ.17 ರಂದು ನಡೆಯಲಿದೆ.
ಸಮಾರಂಭದಲ್ಲಿ ಘನ ಉಪಸ್ಥಿತಿಯಾಗಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರು ಆಗಿರುವ ಯು ಟಿ ಖಾದರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ದಿನೇಶ್ ಗುಂಡೂ ರಾವ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ S. L. ಬೋಜೇಗೌಡ , ಐವನ್ ಡಿಸೋಜಾ ,ಪ್ರತಾಪ್ ಸಿಂಹ ನಾಯಕ್ ,ಮಂಜುನಾಥ್ ಭಂಡಾರಿ , ಧನಂಜಯ್ ಸುರ್ಜಿ ಹಾಗೂ ಕಿಶೋರ್ ಬೊಟ್ಯಾಡಿ ಭಾಗವಹಿಸಲಿದ್ದಾರೆ.
ನಗರಸಭೆ ಪುತ್ತೂರು ಆಡಳಿತಾಧಿಕಾರಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ದರ್ಶನ್ ಎಚ್ ವಿ ಭಾಸೆ ., ನಗರ ಯೋಜನಾ ಪ್ರಾಧಿಕಾರ ಪುತ್ತೂರು ಅಧ್ಯಕ್ಷರಾದ ಅಮಲ ರಾಮಚಂದ್ರ ಮತ್ತು ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕರಾದ ಸಂತೋಷ್ ಕುಮಾರ್ ಎ ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಈ ನೂತನ ಧ್ವಜಸ್ತಂಭವು ಪಟ್ಟಣದ ಗೌರವವನ್ನು ಹೆಚ್ಚಿಸುವುದರ ಜೊತೆಗೆ ದೇಶಭಕ್ತಿಯ ಸಂಕೇತವಾಗಿ ನೆಲ್ಲಿಕಟ್ಟೆ ಪ್ರದೇಶದ ಪ್ರಮುಖ ಆಕರ್ಷಣೆಯಾಗಲಿದೆ .
ನಗರದ ಸಾರ್ವಜನಿಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರಂಭವನ್ನು ಯಶಶ್ವುಗೊಳಿಸಬೇಕಾಗಿ.
ಪೂಡಾ, ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























