ಕನ್ನಡದ ನಟಿ ಹಾಗೂ ರಿಯಾಲಿಟಿ ಶೋ ಸ್ಪರ್ಧಿಯ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ನಡೆದ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ನಡೆದ ಘಟನೆ ಇದಾಗಿದ್ದು, ಈ ಸಂಬಂಧ ಸಂತ್ರಸ್ತೆ ದೂರು ದಾಖಲು ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಪರಿಚಿತ ವ್ಯಕ್ತಿ ಈ ಕೃತ್ಯ ನಡೆಸಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ.
ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ಕ್ರಿಕೆಟ್ ಟೂರ್ನಿ ನಡೆದಿತ್ತು. ಟೂರ್ನಿಯ ಎರಡನೇ ದಿನ ವಾಶ್ ರೂಂ ಹೋದಾಗ ಎದುರಾದ ಅಪರಿಚಿತ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡಿದ್ದ ಮತ್ತು ಫೊಟೋ ತೆಗೆದಿದ್ದ. ಬ್ಲ್ಯಾಕ್ಮೇಲ್ ಮಾಡುವ ಉದ್ದೇಶದಿಂದಲೇ ಫೊಟೋ ವಿಡೀಯೋ ರೆಕಾರ್ಡ್ ಮಾಡಿದ್ದ ಎಂಬ ಆರೋಪವನ್ನು ಮಾಡಲಾಗಿದೆ.
ಸಾಮಾನ್ಯವಾಗಿ ವಿಡಿಯೋ ಮಾಡಿದವರು ಅವರಿಗೆ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡುತ್ತಾರೆ. ಆದರೆ, ಇಲ್ಲಿ ಆಗಿದ್ದೇ ಬೇರೆ. ವಿಡಿಯೋ ರೆಕಾರ್ಡ್ ಮಾಡಿ ಯುವತಿಗೆ ಕಳುಹಿಸಿದೆ ಆಕೆಯ ಆಪ್ತ ಸ್ನೇಹಿತೆಗೆ ಕಳುಹಿಸಿದ್ದ. ‘Swan.3704722’ ಇನ್ಸ್ಟಾ ಅಕೌಂಟ್ನಿಂದ ಸಂದೇಶ ಕಳುಹಿಸಲಾಗಿದೆ.
‘ವಿಡೀಯೋ ವೈರಲ್ ಮಾಡಬಾರದೆಂದರೆ ಹಣ ಕೊಡಬೇಕು’ ಎಂದು ಅಪರಿಚಿತ ಬೆದರಿಕೆ ಹಾಕಿದ್ದ. ವೀಡಿಯೋ ಕಾಲ್ ಮಾಡಿಯೂ ಬೆದರಿಕೆ ಹಾಕಿದ್ದ. ಸದ್ಯ ಆತ ಕಳಿಸಿರುವ ಪೊಟೋಸ್, ವಿಡಿಯೋಗಳನ್ನ ನೀಡಿ ನಟಿ ದೂರು ನೀಡಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಸದ್ಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

























