ವಿಟ್ಲ: ಕಾರು ಪಾರ್ಕ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದು ಹೋಟೆಲ್ ಮ್ಯಾನೇಜರ್ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಹೊಟೇಲ್ ಮ್ಯಾನೇಜರ್ ಹಲ್ಲೆ ನಡೆಸಿರುವ ಪುತ್ತೂರು ನಿವಾಸಿಯ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ವಾಳ ಕೆಳಗಿನ ಪೇಟೆಯ ನಿವಾಸಿ, ಮಿತ್ತಬೈಲ್‌ನಲ್ಲಿರುವ ‘ಫಿಶ್ ಮಾಸ್ಟರ್’ ಹೋಟೆಲ್‌ನಲ್ಲಿ ವ್ಯವಸ್ಥಾಪಕರಾಗಿರುವ ಶಬೀಬ್ ರಹಮಾನ್ ರವರು ಪುತ್ತೂರು ನಿವಾಸಿ ಹಕೀಂ ಕೂರ್ನಡ್ಕರವರ ವಿರುದ್ದ ದೂರು ನೀಡಿದ್ದಾರೆ.
ಫೆ.16ರಮಧ್ಯಾಹ್ನ ಸುಮಾರು 1:20ರ ಸುಮಾರಿಗೆ ನಾನು ಹೋಟೆಲ್‌ಗೆ ಬಂದಾಗ, ಅಲ್ಲಿ ಕಾರುಪಾರ್ಕ್ ಮಾಡಿದ್ದ ಪುತ್ತೂರು ಕೂರ್ನಡ್ಕದ ಹಕೀಂ ಎಂಬವರಿಗೆ ತಮ್ಮ ಕಾರನ್ನು ಸ್ವಲ್ಪ ಬದಿಗೆ ನಿಲ್ಲಿಸುವಂತೆ ವಿನಂತಿಸಿದ್ದೆ. ಈ ವೇಳೆ ಹಕೀಂ ರವರು ನನ್ನ ಕಾರಿನಲ್ಲಿ ಚೆಕ್ ಬುಕ್ ಮತ್ತು ಪ್ರಮುಖ ದಾಖಲೆಗಳಿವೆ, ನೀನು ಅದನ್ನು ಕದಿಯಲು ಬಂದಿದ್ದೀಯಾ? ನೀನು ಕುಡಿದು ಬಂದಿದ್ದೀಯಾ?” ಎಂದು ಕೂಗಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಹೋಟೆಲ್‌ನಲ್ಲಿದ್ದ ಗ್ರಾಹಕರ ಮುಂದೆಯೇ ನನ್ನ ಮೇಲೆ ಹಲ್ಲೆ ನಡೆಸಿ ಅವಮಾನಿಸಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿ, ಇಲ್ಲಸಲ್ಲದ ಆರೋಪ ಹೊರಿಸಿ ಸಾರ್ವಜನಿಕವಾಗಿ ಅವಮಾನಿಸಿದ ಹಕೀಂ ಕೂರ್ನಡ್ಕ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಶಬೀಬ್ ರಹಮಾನ್ ರವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

























