ಮಂಗಳೂರು: ನಗರದ ಮೀನುಗಾರಿಕಾ ದಕ್ಕೆಯಲ್ಲಿ ಬೀದಿ ದೀಪದ ಕಂಬವೊಂದು ಮುರಿದು ಮೈ ಮೇಲೆ ಬಿದ್ದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
ತಮಿಳುನಾಡು ಮೂಲದ ಮುರುಗನ್ (35) ಮೃತಪಟ್ಟವರು. ಮೀನು ಕಾರ್ಮಿಕನಾಗಿ ದುಡಿಯುತ್ತಿದ್ದ ಅವರು, ಮೀನು ಹೊತ್ತು ಬಂದು ಕುಳಿತ್ತಿದ್ದ ವೇಳೆಯಲ್ಲೇ ಕಂಬ ಮುರಿದು ಬಿದ್ದಿದ್ದು, ಇದರಿಂದ ಮುಗುರುನ್ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆ ವೇಳೆಗಾಗಲೇ ಮೃತಪಟ್ಟಿದ್ದಾರೆ.
ಮುರುಗನ್ ಸುಮಾರು 10-12 ವರ್ಷಗಳಿಂದ ದಕ್ಕೆಯಲ್ಲಿ ಮೀನು ಕಾರ್ಮಿಕನಾಗಿ ದುಡಿಯುತ್ತಿದ್ದರು. ಬೋಟುಗಳಿಂದ ಮೀನು ಇಳಿಸುವುದು, ಐಸ್ ತುಂಬಿಸುವುದು ಮೊದಲಾದ ಕೆಲಸಗಳನ್ನು ಮಾಡುತ್ತಿದ್ದರು. ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























