ನಾಥ ಪಂಥೀಯ ಜೋಗಿ ಸಮಾಜ ಸುಧಾರಕ ಸಂಘ ಪುತ್ತೂರು ವತಿಯಿಂದ ಕಾಲಭೈರವ ದೇವರಿಗೆ ರೂಟ್ ಪೂಜೆಯು ಮಾರ್ಚ್ 22 ರಂದು ಮುಕ್ವೆಯ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಆಮಂತ್ರಣ ಪತ್ರಿಕೆಯನ್ನು ಸಂಘದ ಅಧ್ಯಕ್ಷರಾದ ದಯಾನಂದ ಜೋಗಿ ಅವರ ಮನೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಮೋನಪ್ಪ ಪುರುಷ ಮುಗೇರಡ್ಕ, ಪ್ರಧಾನ ಕಾರ್ಯದರ್ಶಿ ರಘುನಾಥ ಜೋಗಿ ಮಣಿಯ, ಜಗದೀಶ್ ಜೋಗಿ ನೆಲ್ಲಿಕಟ್ಟೆ, ಗಂಗಾಧರ ಜೋಗಿ ಮುಗೇರಡ್ಕ, ರಮೇಶ್ ಜೋಗಿ ಮುಕ್ವೆ, ರಮೇಶ್ ಜೋಗಿ ಮುಗೇರಡ್ಕ, ವಿನೋದ್ ಜೋಗಿ ಮುಗೇರಡ್ಕ, ಉಮೇಶ್ ಜೋಗಿ ಮಣಿಯ, ಶಿವ ಜೋಗಿ ಮುಗೇರಡ್ಕ, ರಮೇಶ್ ಜೋಗಿ ಕುಜುಂಬಗದ್ದೆ, ವಿಠಲ ಜೋಗಿ ಮುಕ್ವೆ, ಗಣೇಶ್ ಜೋಗಿ ಮುಗೇರಡ್ಕ, ಚಂದ್ರನಾಥ ಜೋಗಿ ಮುಗೇರಡ್ಕ ಸಹಿತ ಹಲವರು ಉಪಸ್ಥಿತರಿದ್ದರು.

























