ಪುತ್ತೂರು: ಅವಿವಾಹಿತ ಯುವತಿಯೋರ್ವರು ಕೊರೋನಾಗೆ ಬಲಿಯಾದ ಬಗ್ಗೆ ಕೊಳ್ತಿಗೆ ಗ್ರಾಮದ ಕೆಮ್ಮತಕಾನದಿಂದ ವರದಿಯಾಗಿದೆ. ಪೆರ್ಲಂಪಾಡಿ ಕೆಮ್ಮತಕಾನ ಹುಕ್ರಪ್ಪ ಮತ್ತು ಜಾನಕಿಯವರ ಪುತ್ರಿ 24 ರ ಹರೆಯದ ಪುಷ್ಪಾವತಿ ಎಂಬವರೇ ಕೊರೊನಾದಿಂದ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಇವರು ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದಿದ್ದು ಚಿಕಿತ್ಸೆಗಾಗಿ ಜೂ. 23 ರಂದು ಪೆರ್ಲಂಪಾಡಿ ಆಸ್ಪತ್ರೆಗೆ ಕರೆದೊಯ್ದಿದ್ದರು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ಕರೆತಂದು, ಪುತ್ತೂರಿನಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರು ಸಹೋದರಿ ಸೀತಾರವರನ್ನು ಅಗಲಿದ್ದಾರೆ.
ಅಂತ್ಯ ಸಂಸ್ಕಾರದಲ್ಲಿ ಕೈ ಜೋಡಿಸಿದ ಹಿಂದೂ ಜಾಗರಣ ವೇದಿಕೆ ಮೃತದೇಹವನ್ನು ಹಿಂದೂ ಜಾಗರಣ ವೇದಿಕೆಯ ಆಂಬ್ಯುಲೆನ್ಸ್ ಮೂಲಕ ಜೂ.24ರಂದು ಕೆಮ್ಮತಕಾನಕ್ಕೆ ತಂದಿದ್ದು ಬಳಿಕ ಮನೆಯವರ ಜೊತೆ ಸೇರಿ ಅಂತ್ಯ ಸಂಸ್ಕಾರದಲ್ಲೂ ಜಾಗರಣ ವೇದಿಕೆಯ ಕಾರ್ಯಕರ್ತರು ಕೈ ಜೋಡಿಸಿದ್ದಾರೆ. ಜಾಗರಣ ವೇದಿಕೆಯ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.