ಉಪ್ಪಿನಂಗಡಿ: ಬೆಂಗಳೂರಿನ ಯುವ ಉದ್ಯಮಿ, ವಿಜಯ – ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಉಪಾಧ್ಯಕ್ಷ ನಟೇಶ್ ಪೂಜಾರಿ ಅವರ ತಂದೆ ಹೊನ್ನಪ್ಪ ಪೂಜಾರಿ (66 ವ.)ಯವರು ಅಲ್ಪಕಾಲದ ಅಸೌಖ್ಯದಿಂದ ಇಲ್ಲಿನ ಪುಳಿತ್ತಡಿಯ ಸ್ವಗೃಹದಲ್ಲಿ ಮಾ.6ರಂದು ನಿಧನರಾದರು.
ಮೃತರು ಗಾಂಧಿಪಾರ್ಕ್ ಸದರ್ನ್ ಇಂಡಿಯಾ ಬೀಡಿ ವರ್ಕ್ಸ್‌ನಲ್ಲಿ ಕೆಲಸದಲ್ಲಿದ್ದು, ನಿವೃತ್ತಿಯಾಗಿದ್ದರು.
ಸ್ಥಳೀಯವಾಗಿ ‘ಒನ್ನಣ್ಣ’ ಎಂದೇ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಲೀಲಾವತಿ, ಪುತ್ರ ನಟೇಶ್ ಪೂಜಾರಿ ಹಾಗೂ ಪುತ್ರಿಯರಾದ ಜ್ಯೋತಿ, ವಿಮಲಾರವರನ್ನು ಆಗಲಿದ್ದಾರೆ. ಗೌಂಡತ್ತಿಗೆಯ ಅವರ ಜಾಗದಲ್ಲಿಯೇ ಮೃತರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.



























