ಪುತ್ತೂರು: ಉಜಿರೆ ನಿವಾಸಿ ಚಿದಾನಂದ ಪ್ರಭು ಹಾಗೂ ಜಮುನಾ ಚಿದಾನಂದ ಪ್ರಭು ದಂಪತಿಯ ಪುತ್ರಿ, ಬೊಳುಬೈಲ್ ಅಶ್ವಿನ್ ಕುಮಾರ್ ರವರ ಪತ್ನಿ, ಬೊಳುಬೈಲ್ ಪಾವನರಾಮ ಹಾಗೂ ವಿದ್ಯಾ ಪಾವನರಾಮರವರ ಸೊಸೆಯಾಗಿರುವ ಡಾ.ಸಜ್ಞಾ ಕೆ.ಸಿರವರು ಎಂ.ಡಿ.ಎಸ್ ಪದವಿಯಲ್ಲಿ ರಾಜೀವಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನಲ್ಲಿ ಆರನೇ ಬ್ಯಾಂಕ್ ಗಳಿಸಿದ್ದಾರೆ.
ಡಾ.ಸಜ್ಞಾಕೆ.ಸಿರವರು ಹಾಸನದ ಹಾಸನಾಂಬ ಡೆಂಟಲ್ ಕಾಲೇಜ್ ಆಫ್ ಆಸ್ಪತ್ರೆಯಲ್ಲಿ ಎಂ.ಡಿ.ಎಸ್ ಪದವಿಯನ್ನು, ಸುಳ್ಯ ಕೆವಿಜಿ ಡೆಂಟಲ್ ಕಾಲೇಜ್ ಆ್ಯಂಡ್ ಆಸ್ಪತ್ರೆಯಲ್ಲಿ ಬಿಡಿಎಸ್ ಪದವಿಯನ್ನು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಉಜಿರೆ ಎಸ್.ಡಿ.ಎಂ ವಿದ್ಯಾಸಂಸ್ಥೆಯಲ್ಲಿ ಪಡೆದಿದ್ದರು.


























