ಅರಿಯಡ್ಕ: ಕೌಡಿಚ್ಚಾರು ಮುಖ್ಯ ರಸ್ತೆಯ ಬದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ ಘಟನೆ ಮಾ.11ರಂದು ನಡೆದಿದೆ.
ಶವ ಪತ್ತೆಯಾದ ಕೂಡಲೇ ಸ್ಥಳೀಯರು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ಸಂಪ್ಯ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶವವನ್ನು ನೋಡಿದ ಸ್ಥಳೀಯರು ಪುತ್ತೂರು ಕಡೆಯಿಂದ ಸುಳ್ಯದ ಕಡೆಗೆ ಒಂದು ದಿನದ ಹಿಂದೆ ನಡೆದುಕೊಂಡು ಹೋಗುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.

























