ಕಲ್ಲಡ್ಕದ ಯುವಕನೋರ್ವ ಗೂನಡ್ಕದ ಕೊಠಡಿಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಮೂಲದ ತಿಲಕರಾಜ್ ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ನಿನ್ನೆ ಸಂಜೆ ಕಲ್ಲಡ್ಕದಿಂದ ಮಡಿಕೇರಿಗೆಂದು ತನ್ನ ಕಾರಿನಲ್ಲಿ ಹೊರಟಿದ್ದ ತಿಲಕರಾಜ್ ಸಂಜೆ ವೇಳೆಗೆ ಗೂನಡ್ಕದಲ್ಲಿ ರೂಂ ಮಾಡಿಕೊಂಡಿದ್ದು, ಇಂದು ಅದರ ಬಾಗಿಲು ಓಪನ್ ಆಗದಿದ್ದುದನ್ನು ಗಮನಿಸಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯಿತೆನ್ನಲಾಗಿದೆ. ಪೊಲೀಸರು ಬಂದ ಬಳಿಕ ಸಮಾಜ ಸೇವಕ ತಾಜ್ ಟರ್ಲಿಯವರು ಮಾಡಿನ ಮೂಲಕ ಒಳ ಪ್ರವೇಶಿಸಿ ಮೃತದೇಹ ಹೊರತೆಗೆಯುವಲ್ಲಿ ಸಹಕರಿಸಿದರು.
ಕಲ್ಲಡ್ಕದಲ್ಲಿ ಬ್ಯುಸಿನೆಸ್ ಮಾಡಿಕೊಂಡಿದ್ದ ತಿಲಕ್‌ರಾಜ್‌ರಿಗೆ 29 ವರ್ಷ ವಯಸ್ಸಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.



























