ವಿಟ್ಲ: ಆಟೋ ಚಾಲಕರ ಮತ್ತು ಮಾಲಕರ ಸೌಹಾರ್ದ ಸಂಘ (ರಿ), RCMS ವಿಟ್ಲ ಇದರ ಸಕ್ರಿಯ ಸದಸ್ಯರಾದ ಸುರೇಶ್ (ಕುಟ್ಟ) ಕೊಡಂಗಾಯಿ ಅವರು ಅನಾರೋಗ್ಯದ ಹಿನ್ನಲೆ ನಿಧನರಾಗಿದ್ದಾರೆ.
ಮೃತರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಅಗಲಿಕೆಯಿಂದ ಸಂಘಕ್ಕೆ ಹಾಗೂ ಕುಟುಂಬಕ್ಕೆ ಅಪಾರ ನಷ್ಟವಾಗಿದೆ.



























