ವಿಟ್ಲ: ರಾಜ್ಯ ಸರಕಾರದ ಬಜೆಟ್ ನಲ್ಲಿ ಘೋಷಣೆಯಾದ ಮಾಣಿ ಮತ್ತು ಸಜಿಪನಡು ಪೊಲೀಸ್ ಠಾಣೆಗಳಿಗೆ ಗ್ರಾಮಗಳ ವ್ಯಾಪ್ತಿ ನಿಗದಿಗೊಳಿಸಲಾಗಿದೆ.
ವಿಟ್ಲ, ಪುತ್ತೂರು ನಗರ, ಬಂಟ್ವಾಳ ಗ್ರಾಮಾಂತರ ಮತ್ತು ಬಂಟ್ವಾಳ ನಗರ ಪೊಲೀಸ್ ಠಾಣೆಗಳ ಕೆಲವು ಗ್ರಾಮಗಳನ್ನು ಹೊಸ ಠಾಣೆ ಗಳಿಗೆ ನೀಡಲಾಗಿದೆ. ಹೊಸ ಠಾಣೆಗಳ ಪೈಕಿ ಮಾಣಿ ಪೊಲೀಸ್ ಠಾಣೆ 13 ಮತ್ತು ಸಜಿಪನಡು ಪೊಲೀಸ್ ಠಾಣೆಗೆ 11 ಗ್ರಾಮಗಳ ವ್ಯಾಪ್ತಿ ಹೊಂದಲಿವೆ.
ಮಾಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಡ್ಕಿದು , ಕೆದಿಲ, ಕಬಕ, ಕೊಡಿಪ್ಪಾಡಿ, ಗೋಳ್ತಮಜಲು, ಬಾಳಿಲ, ಪೆರಾಜೆ, ಮಾಣಿ, ಅನಂತಾಡಿ, ಬರಿಮಾರು, ನೆಟ್ಲಮುಡ್ನೂರ್ , ಶಂಭೂರು ಮತ್ತು ಕಡೇಶಿವಾಲಯ ಗ್ರಾಮಗಳು ಸೇರಿದೆ.
ಮಾಣಿ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಲಿರುವ ಗ್ರಾಮಗಳಲ್ಲಿ ಪ್ರಸ್ತುತ ಬರಿಮಾರು, ಶಂಭೂರು ಮತ್ತು ಕಡೇಶಿವಾಲಯ ಗ್ರಾಮಗಳು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿವೆ.
ಕೆದಿಲ, ಕೊಡಿಪ್ಪಾಡಿ ಮತ್ತು ಕಬಕ, ಪುತ್ತೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇವೆ. ಇಡ್ಕಿದು , ಪೆರಾಜೆ ನೆಟ್ಲ ಮುಡ್ನೂರ್ , ಅನಂತಾಡಿ ಮತ್ತು ಮಾಣಿ ಗ್ರಾಮಗಳು ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿವೆ.
ಗೋಳ್ತಮಜಲು ಮತ್ತು ಬಾಳ್ತಿಲ ಗ್ರಾಮಗಳು ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿವೆ.
ಹೊಸಠಾಣೆಗಳು ಪೊಲೀಸರು ಒತ್ತಡ ರಹಿತವಾಗಿ ಕೆಲಸ ನಿರ್ವಹಣೆಗೆ ಸಹಕಾರಿ ಆಗಲಿವೆ. ಆಡಳಿತಾತ್ಮಕ ವ್ಯವಸ್ಥೆ ಪೂರ್ಣಗೊಂಡು ಸಿಬ್ಬಂದಿ ನೇಮಕ ಪ್ರಕ್ರಿಯೆ ಆದ ಬಳಿಕವಷ್ಟೇ ಹೊಸ ಪೊಲೀಸ್ ಠಾಣೆ ಕಾರ್ಯ ನಿರ್ವಹಣೆ ಮಾಡಲಿವೆ.


























