ಬೆಳ್ತಂಗಡಿ: ನಡ ಗ್ರಾಮದ ಅಂತ್ರಾಯ ಪಲ್ಕೆ ಎಂಬಲ್ಲಿರುವ ಅಂತ್ರಾಯ ಗುಂಡಿಗೆ ಸ್ನಾನಕ್ಕೆ ಬಂದಿದ್ದ ನಾಲ್ವರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಉಜಿರೆಯ ಕುಂಟಿನಿ ಪರಿಸರದ ನಾಲ್ಕು ಮಂದಿ ಬಾಲಕರು ಅಂತ್ರಾಯ ಗುಂಡಿಗೆ ಸ್ನಾನಕ್ಕೆ ಬಂದು ಸ್ನಾನ ಮಾಡುವಾಗ ಉಜಿರೆ ಕುಂಟನಿ ನಿವಾಸಿ ಹಸನ್ ಎಂಬವರ ಪುತ್ರ ಉಜಿರೆ ಶಾಲಾ ವಿದ್ಯಾರ್ಥಿ ಹಫೀಝ್ (15ವ) ಎಂಬಾತ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ.
ಗುಂಡಿಯಲ್ಲಿ ಸ್ಥಳೀಯ ಹುಡುಕಾಟ ನಡೆಸಿ ಶವವನ್ನು ಮೇಲಕ್ಕೆ ಎತ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿದುಬಂದಿದೆ.


























