ಪುತ್ತೂರು: ಮೂಲತಃ ಇಲ್ಲಿನ ಸೂತ್ರಬೆಟ್ಟು ನಿವಾಸಿಯಾಗಿದ್ದು ಪ್ರಸ್ತುತ ಕಡಬ ನಿವಾಸಿಯಾಗಿದ್ದ ಎಸ್. ರಾಮಚಂದ್ರ( 55 ವ) ಎಂಬವರು ಹೃದಯಾಘಾತದಿಂದ ನಿಧನ ಹೊಂದಿದರು.
ರಾಮಚಂದ್ರರವರು ಕಳೆದ ಹಲವಾರು ವರ್ಷಗಳಿಂದ ರೈಲ್ವೆ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದರು.
ಮೃತರು ಪತ್ನಿ ಅನಿತಾ ಆರ್. ಪುತ್ರಿಯರಾದ ರೇಶ್ಮಾ , ಶಿಲ್ಪ, ಮತ್ತು ಶುಭಾಶ್ರೀ ಹಾಗೂ ಸಹೋದರರಾದ ಎಸ್ ವಿಜಯ್ ಮತ್ತು ಸಿ. ಚಂದ್ರ ರವರನ್ನು ಅಗಲಿದ್ದಾರೆ.
ಮೃತರ ಮನೆಗೆ ಹಲವಾರು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.


























