ಮಂಗಳೂರು: ಕಳೆದ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ ವಾರಂಟ್ ಹೊಂದಿದ್ದ ಆರೋಪಿತನನ್ನು ಉರ್ವಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಸುಹಾನ್ @ ಸೋನು (33), ಬಿರಾ ಪೂಜಾರಿ ಕಂಪೌಂಡ್, ಅಶೋಕ ನಗರ, ಮಂಗಳೂರು ನಿವಾಸಿ ಎಂದು ಗುರುತಿಸಲಾಗಿದೆ.
ಆರೋಪಿತನ ವಿರುದ್ಧ ಉರ್ವಾ ಪೊಲೀಸ್ ಠಾಣೆ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ:
- ಉರ್ವಾ ಪೊಲೀಸ್ ಠಾಣೆ ಅ.ಕ್ರ. 62/2016 – ಐಪಿಸಿ ಕಲಂ 399, 120(B)
- ಉರ್ವಾ ಪೊಲೀಸ್ ಠಾಣೆ ಅ.ಕ್ರ. 126/2017 – ಐಪಿಸಿ ಕಲಂ 120(B), 399, 402, 188
- ಮಂಗಳೂರು ಉತ್ತರ ಪೊಲೀಸ್ ಠಾಣೆ ಅ.ಕ್ರ. 32/2020 – ಐಪಿಸಿ ಕಲಂ 143, 147, 148, 504, 506, 323, 324 ಹಾಗೂ 149
ಈ ಪ್ರಕರಣಗಳಲ್ಲಿ ಆರೋಪಿಯಾಗಿರುವ ಸುಹಾನ್ ವಿರುದ್ಧ ಉರ್ವಾ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಘನ ನ್ಯಾಯಾಲಯವು ಎಲ್.ಪಿ.ಸಿ ವಾರಂಟ್ ಹೊರಡಿಸಿತ್ತು.
ಬಂಧನ ತಪ್ಪಿಸಿಕೊಂಡು ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನನ್ನು ಉರ್ವಾ ಪೊಲೀಸ್ ಠಾಣೆಯ ಎಎಸ್ಐ ಲಕ್ಷ್ಮಣ್ ಹಾಗೂ ಸಿಬ್ಬಂದಿ ತಂಡವು ಮಹಾರಾಷ್ಟ್ರದ ಮುಂಬೈನಲ್ಲಿ 29-03-2026 ರಂದು ಪತ್ತೆ ಹಚ್ಚಿ ಬಂಧಿಸಿದೆ.
ಬಂಧಿತನನ್ನು ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.
ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.



























