ವಿಟ್ಲ: ಸ.ಹಿ.ಪ್ರಾ.ಶಾಲೆ ಪಡಿಬಾಗಿಲಿನಲ್ಲಿ 2021-2022 ನೇ ಶೈಕ್ಷಣಿಕ ವರ್ಷದ ಆರಂಭವೂ ಜು.1 ರಂದು ನಡೆಯಿತು.
ಮಾಜಿ ಸೈನಿಕರು ಹಾಗೂ ಶಾಲಾ ಹಿತ ಚಿಂತಕರಾದ ಸೀತಾರಾಮ ಶೆಟ್ಟಿ ಕುಕ್ಕೆ ಬೆಟ್ಟು ಇವರು ದೀಪ ಬೆಳಗಿಸುವುದರ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ರಾದ ಬಾಲಕೃಷ್ಣಕಾರಂತ, ವಿದ್ಯಾಸಿರಿ ಶಿಕ್ಷಣ ಕೇಂದ್ರದ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ , ಕೇಪು ಗ್ರಾಮ ಪಂಚಾಯತಿ ಸದಸ್ಯರಾದ ಜಗಜ್ಜೀವನ ರಾಂ ಶೆಟ್ಟಿ, ಎಸ್.ಡಿ.ಎಂ.ಸಿ ಸದಸ್ಯರಾದ ಜಿನಚಂದ್ರ ಜೈನ, ಲಿಂಗಪ್ಪ ಗೌಡ ಹಾಗೂ ಪೋಷಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಶ್ರೀಮತಿ ಶಶಿಕಲಾ. ಎನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಶ್ರೀಮತಿ ಪುಷ್ಪಾವತಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಹಶಿಕ್ಷಕಿ ಶ್ರೀಮತಿ ಮಲ್ಲಿಕಾ .ಕೆ.ಎಸ್. ವಂದನೆ ಸಲ್ಲಿಸಿದರು.