ಸಂಘಟನೆಯೇ ಶಕ್ತಿ ಎನ್ನುವ ಧ್ಯೇಯತೆಯೊಡನೆ ಹಿಂದೂ ತತ್ವದಡಿ ಮುಂದುವರೆಯುತ್ತಾ ಸೇವೆಯೆಂಬ ಯಜ್ಞದಲ್ಲಿ ಸಮಿತೆಯಂತೆ ಉರಿಯುವ ಎನ್ನುವ ಸಾಲಿನ ಪ್ರತಿರೂಪವೇ ಇವರು.. ಶ್ರೀ ರಾಮ ಗೆಳೆಯರ ಬಳಗ ಪುತ್ತಿಲದ ಸಕ್ರಿಯ ನಿರ್ವಾಹಕರಾಗಿ ಈ ಮೂಲಕ ಲೆಕ್ಕಕ್ಕೂ ಸಿಗಲಾರದಷ್ಟು ಶ್ರಮವಹಿಸಿರುವ ಸೇವಾಧುರೀಣರಿವರು..
ಹೌದು ಇವರೇ ಸಂಘಟನಾ ಚತುರ ಸಾಮಾಜಿಕ ಸೇವಾಕರ್ತ ಅರುಣ್ ಕುಮಾರ್ ಪುತ್ತಿಲ..ಅರುಣ್ ಅವರು ಮಾತನಾಡಲು ನಿಂತರೆಂದರೆ ಎಲ್ಲರೂ ಒಂದು ಬಾರಿ ಅವರತ್ತ ನೆಟ್ಟ ಗಮನವನ್ನು ತೋರುವಂತಿರುತ್ತದೆ.. ವಾಸ್ತವತೆಯನ್ನು ಅದರಂತೆ ಬಿಂಬಿಸಿ ಮನಸು ಮುಟ್ಟಿಸಬಲ್ಲ ಸಮರ್ಥ ನಾಯಕರಿವರು.. ಇವರ ಸಾಮಾಜಿಕ ಕಾರ್ಯಗಳ ಪಟ್ಟಿ ಎಲ್ಲರಿಗೂ ಚಿರಪರಿಚಿತ..
ಬಡವರು, ನೊಂದವರು, ಅಶಕ್ತರು, ಸಮಸ್ಯೆಯಲ್ಲಿರುವವರನ್ನು ತುಸು ದೂರದಿಂದಲೇ ಕಂಡರು ಇವರು ಮರುಗಿಬಿಡುತ್ತಾರೆ.. ಅನುಕಂಪವೋ, ಸೇವೆಗೈಯುವ ಅಪಾರ ಇಚ್ಛೆಯ ಪರಿಣಾಮವೋ ಅಥವಾ ಸಮಾಜದಲ್ಲಿ ಪಡೆದ ಹುಟ್ಟಿಗೆ ಸಾರ್ಥಕತೆಯ ಜೀವನದ ದಾರಿಯೋ.. ಒಟ್ಟಿನಲ್ಲಿ ಹಲವು ಧನಾತ್ಮಕ ಚಿಂತನೆಯೊಡನೆ ಜನರಿಗಾಗಿ ತಾನು ಮಿಡಿದು ಸೇವೆಗೈಯುತ್ತಲೇ ಇದ್ದಾರೆ..
ಜನಪ್ರಿಯ ಹಿಂದೂ ಮುಖಂಡನಾಗಿ ಪುತ್ತೂರು ಮಾತ್ರವಲ್ಲದೇ ಹಲವೆಡೆ ಸಮಸ್ಯೆಗಳಾದಲ್ಲಿ ಅರುಣ್ ಅವರ ಸಹಕಾರ ಇದ್ದೇ ಇರುತ್ತೆ.. ಇತ್ತೀಚಿನ ಲಾಕ್ ಡೌನ್ ಕೊರೋನಾ ಮಳೆಗಾಲದ ಸಂದರ್ಭದ ಪರಿಸ್ಥಿತಿಯಲ್ಲಂತೂ ಇವರ ಸಹಕಾರ ಅನನ್ಯ..
ಬಡಕುಟುಂಬವೊಂದಕ್ಕೆ ಮನೆ ನಿರ್ಮಾಣ ಕಾರ್ಯ, ರಸ್ತೆ ಬೇಡಿಕೆ ಈಡೇರುವಿಕೆಯಲ್ಲಿ ಪಾಲು, ಮುಂಡೂರು ತೋಟವೊಂದಕ್ಕೆ ಸಿಡಿಲು ಬಡಿದು ಹಾನಿಯಾದ ಸಂದರ್ಭದಲ್ಲಿ ಪರಿಹಾರ ನೀಡಲು ಮನವಿ ಕಾರ್ಯ, ಕೋವಿಡ್ ಸೋಂಕಿತರ ಮನೆ ಭೇಟಿ ಕಾರ್ಯ, ಕಿಟ್ ವಿತರಣೆ, ಆಶಾ ಕಾರ್ಯಕರ್ತೆಯರಿಗೆ ಸಹಕಾರ, ಮರತೆರವು ಕಾರ್ಯ, ಮರ ಬೆಳೆಸಿ ಅಭಿಯಾನಕ್ಕೆ ಚಾಲನೆ, ಭತ್ತ ಬೆಳೆಯೋಣ ಕಾರ್ಯಕ್ರಮ ಇವೆಲ್ಲವೂ ಕೆಲವೇ ಕೆಲವು ವಿಚಾರಗಳು.. ಆದರೆ ಲೆಕ್ಕಕ್ಕೂ ಸಿಗದಷ್ಟು ಹೆಜ್ಜೆ ಗುರುತುಗಳಿವೆ. ಎಲ್ಲಾ ಕಾರ್ಯದಲ್ಲೂ ಅರುಣ್ ಕುಮಾರ್ ಪುತ್ತಿಲ ಅನ್ನುವ ಹೆಸರೊಂದು ಕಾಣಿಸುತ್ತದೆ…
ತನ್ನದೇ ಜೀವನದ ನಡುವೆಯೂ ಧಾರ್ಮಿಕ ಕಾರ್ಯಕ್ರಮಗಳನ್ನೂ ಸಂಭಾಳಿಸುತ್ತ ಇನ್ನೊಂದೆಡೆ ಜೀವನದ ಬಹುಪಾಲನ್ನು ಸಮಾಜದ ಮಧ್ಯೆಯೇ ಕಳೆಯುತ್ತಾ ನಿಸ್ವಾರ್ಥ ಭಾವ, ಯಾವುದೇ ಪ್ರಚಾರಗಳ ಅಭಿಲಾಷೆಯೇ ಇಲ್ಲದೆ ಸೇವೆಗೈಯುತ್ತಿರುವ ಇವರ ಈ ಕೈಂಕರ್ಯ ನಿರಂತರವಾಗಿರಬೇಕೆಂಬುದೇ ಎಲ್ಲರ ಹಾರೈಕೆ…
🖊️ ಪ್ರಜ್ಞಾ ಓಡಿಲ್ನಾಳ