ಪುತ್ತೂರು : ಕೊರೊನಾ ಪ್ರಯುಕ್ತ ಎಲ್ಲೆಡೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು.. ಲಾಕ್ ಡೌನ್ ಕಾರಣಕ್ಕೆ ದೇವಳಗಳೆಲ್ಲವನ್ನೂ ಮುಚ್ಚಲಾಗಿತ್ತು. ಇದೀಗ ಮತ್ತೆ ದೇವಸ್ಥಾನಗಳ ಪೂಜೆ ಆರಂಭವಾಗಿದೆ.
ಇಲ್ಲಿಯವರೆಗೆ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೂ ಪೂಜಾ ಕಾರ್ಯಗಳು, ಸೇವೆಗಳು ಅಲಭ್ಯವಾಗಿತ್ತು. ಇದೀಗ ಜೂ.5 ರಿಂದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವೂ ಕೂಡ ತೆರೆದುಕೊಳ್ಳಲಿದ್ದು ದೇವರ ದರ್ಶನ ಹಾಗೂ ಆರತಿ ಪಡೆಯಲು ಅವಕಾಶವಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.