ಬೆಟ್ಟಂಪಾಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಆಂತರಿಕ ಗುಣಮಟ್ಟ ಭಾರವಸಾ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಆಯೋಜಿಸಲಾದ ದೈನಂದಿನ ಜೀವನಕ್ಕಾಗಿ ಯೋಗ ಆನ್ಲೈನ್ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಜು.5 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ ಇವರು ಯೋಗ ದೈನಂದಿನ ಜೀವನದ ಭಗವಾಗಬೇಕು ಎಂದರು. ಹಾಗೆಯೇ ಯಾವುದೇ ಆಸನ ಮಾಡುವಾಗ ಸರಿಯಾದ ಕ್ರಮಗಳನ್ನು ಪಾಲಿಸಿ ಅವುಗಳ ಮಹತ್ವ ಅರಿತುಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
ತರಬೇತುದಾರರಾಗಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಹರಿಪ್ರಸಾದ್ ಎಸ್ ಉಪಸ್ಥಿತರಿದ್ದು ಯೋಗ ತರಬೇತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ಯೋಗಾಭ್ಯಾಸ ಕೇವಲ ಆಸನಗಳಿಗೆ ಸೀಮಿತವಾಗದೆ ಮಾನಸಿಕ ಸಿದ್ಧತೆ, ಉಸಿರಾಟದ ಕ್ರಿಯೆಗಳನ್ನು ಒಳಗೊಂಡಿದ್ದು ಆರೋಗ್ಯಕರ ಜೀವನಕ್ಕೆ ಅತ್ಯಾವಶ್ಯಕ ಎಂದು ಹೇಳಿದರು.
ಗೂಗಲ್ ಮೀಟ್ ಮೂಲಕ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಆಸಕ್ತ ಸ್ವಯಂ ಸೇವಕರು ಭಾಗವಹಿಸಿದರು, ಸ್ವಯಂ ಸೇವಕರಾದ ಲಿಖಿತಾ ಕೆ ಪ್ರಾರ್ಥಿಸಿದರು, ಅನುಪಮಾ ಕೆ ಸ್ವಾಗತಿಸಿದರು, ನವನೀತಾ ಕೆ ವಂದಿಸಿದರು, ಚೈತ್ರಾ ಎ ಬಿ ಕಾರ್ಯಕ್ರಮವನ್ನು ನಿರ್ವಹಿಸಿದರು.