ಕೊರೋನಾ ಸಂದರ್ಭದಲ್ಲಿ ಹಲವು ಕೈಗಳು ತೆರೆಮರೆಯಲ್ಲಿದ್ದು ಶ್ರಮಿಸಿವೆ..ನೂರಾರು ಜನ ತಮ್ಮ ಅಮೂಲ್ಯವಾದ ಸಮಯವನ್ನು ಇನ್ನೊಬ್ಬರ ನೆರವಿಗಾಗಿ ಮೀಸಲಿಟ್ಟ ಸಾವಿರಾರು ನಿದರ್ಶನಗಳು ಕಣ್ಣ ಮುಂದಿವೆ..
ಅದರಂತೆ ಇದೇ ಕೋವಿಡ್ ತುರ್ತು ಸಂದರ್ಭದಲ್ಲಿ ಪುತ್ತೂರಿನ ಹೆಮ್ಮೆಯ ಶಾಸಕ ಸಂಜೀವ ಮಠಂದೂರು ಅವರ ವಾರ್ ರೂಂನ ಆಂಬ್ಯುಲೆನ್ಸ್ ಚಾಲಕನಾಗಿ ಸೇವೆಸಲ್ಲಿಸಿದವರೊಬ್ಬರಿದ್ದಾರೆ..
ನವರಾತ್ರಿ ಉತ್ಸವದ ಸಂದರ್ಭದಲ್ಲಿ ಇವರ ಜಾನಪದ ಕಲೆ ಎಲ್ಲರನ್ನೂ ಮೋಡಿಮಾಡುವಂತಿರುತ್ತದೆ. ಹುಲಿ ಕುಣಿತದ ನಿಸ್ಸೀಮ, ತಾಸೆ ಸದ್ದಿನ ಡಿಂಡಿಮದಲ್ಲಿ ನೈಪುಣ್ಯತೆ ಪಡೆದಿರುವ ಈ ಕಲಾವಿದ ಇತ್ತೀಚೆಗೆ ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸಿರುತ್ತಾರೆ. ಇವರೇ ಪುತ್ತೂರಿನ ದರ್ಬೆಯ ಚಂದ್ರಶೇಖರ್ ಅವರ ಪುತ್ರ ಮನೋಜ್ ಪಿ ಸಿ.
ಯುವಕನಾಗಿದ್ದುಕೊಂಡು ಸಾಮಾಜಿಕವಾಗಿ ತನ್ನನ್ನು ತಾನು ಗುರುತಿಸಿಕೊಂಡು, ಸಮಸ್ಯೆಗೆ ತಕ್ಷಣ ಪ್ರತಿಸ್ಪಂದಿಸುತ್ತಾ, ಶಾಸಕರ ವಾರ್ ರೂಂಗೆ ಅಗತ್ಯ ತುರ್ತು ಕರೆ ಬಂದಾಗ ಅತೀ ಶೀಘ್ರದಲ್ಲಿ ತನ್ನ ಆಂಬ್ಯುಲೆನ್ಸ್ ಸೇವೆಯಲ್ಲಿ 45 ದಿನಗಳವರೆಗೆ ಒಟ್ಟು 157 ಟ್ರಿಪ್ ಮಾಡಿ 240 ರೋಗಿಗಳಿಗೆ ಸ್ಪಂದನಾ ಸೇವೆಯಲ್ಲಿ ನಿರತರಾಗಿದ್ದವರು ಮನೋಜ್..
ತಮ್ಮ ಈ ನಿಸ್ವಾರ್ಥ ಸೇವೆಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು ಈ ಸೇವಾಕೈಂಕರ್ಯ ಹೀಗೇ ನಿರಂತರವಾಗಿರಲಿ…
🖊️ಪ್ರಜ್ಞಾ ಓಡಿಲ್ನಾಳ