ಪುತ್ತೂರು : ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈಯವರ ಶಿಫಾರಸ್ಸಿ ನಂತೆ ಕಾಂಗ್ರೆಸ್ ಅಲ್ಪ ಸಂಖ್ಯಾತಘಟಕದ ಪುತ್ತೂರು ಬ್ಲಾಕ್ ನ ಅಧ್ಯಕ್ಷರಾಗಿ ಉದ್ಯಮಿ ಎ ಪಿ ಎಂ ಸಿ ನಿರ್ದೇಶಕರಾದ ವಿ ಎಚ್ ಎ ಶಕೂರು ಹಾಜಿಯವರನ್ನು ಜಿಲ್ಲಾ ಅಧ್ಯಕ್ಷ ಶಾಹುಲ್ ಹಮೀದ್ ರವರು ನೇಮಕ ಗೊಳಿಸಿರುತ್ತಾರೆ.
ಶಕೂರು ಹಾಜಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಪುತ್ತೂರು ಅಡಿಕೆ ವರ್ತಕ ಸಂಘ ಅಧ್ಯಕ್ಷ ರಾಗಿ ಮತ್ತು ,ಧಾರ್ಮಿಕ ಹಾಗೂ ಹಲವಾರು ಸಾಮಾಜಿಕ ಸಂಘಟನೆಯಲ್ಲಿ ತೊಡಗಿಸಿ ಕೊಂಡವರಾಗಿರುತ್ತಾರೆ.