ಕೋಡಿಂಬಾಡಿ : ಬಿಲ್ಲವ ಸಂಘದ ಮಹಾಸಭೆಯು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಜಯಂತ ನಡುಬೈಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಜಯಾನಂದ ಕೆ , ಉಲ್ಲಾಸ್ ಕೋಟ್ಯಾನ್, ಜಯಪ್ರಕಾಶ್ ಬದಿನಾರು, ಪ್ರೇಮಲತಾ ಡೆಕ್ಕಾಜೆ, ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿ ವಿಮಲ ಮತ್ತು ಮಲ್ಲಿಕಾ ಕಾಂತಲಿಕ್ಕೆ ಉಪಸ್ಥಿತರಿದ್ದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು . ಅಧ್ಯಕ್ಷರಾಗಿ ಜಯಪ್ರಕಾಶ್ ಬದಿನಾರು, ಉಪಾಧ್ಯಕ್ಷರಾಗಿ ಶ್ರೀಧರ ಪೂಜಾರಿ ಕೆದಿಕಂಡೆ, ಕಾರ್ಯದರ್ಶಿ ಈಶ್ವರ ಪೂಜಾರಿ ನಿಡ್ಯ , ಜೊತೆ ಕಾರ್ಯದರ್ಶಿಯಾಗಿ ವಿಜಯ ಚೀಮುಳ್ಳು ,ಕೋಶಾಧಿಕಾರಿಯಾಗಿ ಉಮೇಶ್ ಡೆಕ್ಕಾಜೆ ಆಯ್ಕೆಯಾದರು.
ಮಹಿಳಾ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾಗಿ ಪ್ರೇಮಲತಾ ಡೆಕ್ಕಾಜೆ, ಉಪಾಧ್ಯಕ್ಷರಾಗಿ ಹರಿಣಾಕ್ಷಿ ಡೆಕ್ಕಾಜೆ, ಕಾರ್ಯದರ್ಶಿಯಾಗಿ ಮಲ್ಲಿಕಾ ಕಾಂತಳಿಕೆ, ಜೊತೆ ಕಾರ್ಯದರ್ಶಿಯಾಗಿ ರಮ್ಯಾ, ಕೋಶಾಧಿಕಾರಿಯಾಗಿ ಕವಿತಾ ಕೈಪ ಆಯ್ಕೆಯಾದರು.