ಪುತ್ತೂರು : ಉದ್ಯಮಿಯೊಬ್ಬರಿಗೆ 1.5 ಕೋಟಿ ಮೌಲ್ಯದ ಸಿ.ಎಸ್.ಟಿ ಕ್ಯಾಂಟೀನ್ ಟೆಂಡರ್ ಕೊಡಿಸುವುದಾಗಿ ಹಾಗೂ ಲಕ್ಷಾಂತರ ಮೌಲ್ಯದ ವ್ಯಾಪಾರ ಒದಗಿಸಿಕೊಡುವುದಾಗಿ ಹಾಗೂ ದೇಶಾದಾದ್ಯಂತ ಮಾರಾಟಗಾರರನ್ನು ಹುಡುಕಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿದ್ದು ಈ ಬಗ್ಗೆ ಉದ್ಯಮಿ ಪುರುಷರಕಟ್ಟೆ ನಿವಾಸಿ ಶ್ರೀನಿವಾಸ್ ರಾವ್ ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ವರದಿಯಾಗಿದೆ.
ಪುರುಷರಕಟ್ಟೆ ಪೂರ್ಣಿಮ ಆಯುರ್ವೇದಿಕ್ ಸೋಪ್ ಇಂಡಸ್ಟ್ರೀಸ್ ನ ಮಾಲಕರಾದ ಶ್ರೀನಿವಾಸ್ ರಾವ್ ರವರಿಗೆ ಆರೋಪಿಗಳಾದ Bizzrun Salessmart Exim Pvt. Ltd ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪದಾಧಿಕಾರಿಗಳಾದ ಮಯಾಂಕ್ ತಿವಾರಿ, ನಿತೀಶ್ ಕುಮಾರ್, ರಾಜ್ ರಾಘವ್ ಮತ್ತು ಹರಿಕೇಶ್ ತಿವಾರಿ 1.5 ಕೋಟಿ ಮೌಲ್ಯದ ಸಿ.ಎಸ್.ಟಿ ಕ್ಯಾಂಟೀನ್ ಟೆಂಡರ್ ಕೊಡಿಸುವುದಾಗಿ ಹಾಗೂ ತಿಂಗಳಿಗೆ 30 ಲಕ್ಷ ರೂ. ಮೌಲ್ಯದ ವ್ಯಾಪಾರ ಒದಗಿಸಿಕೊಡುವುದಾಗಿ ಹಾಗೂ ದೇಶಾದಾದ್ಯಂತ ಮಾರಾಟಗಾರರನ್ನು ಹುಡುಕಿಕೊಡುವುದಾಗಿ ನಂಬಿಸಿ ಶ್ರೀನಿವಾಸ್ ರಾವ್ ರವರ ಆಯುರ್ವೇದಿಕ್ ಸೋಪ್ ಇಂಡಸ್ಟ್ರೀಸ್ ನ ಬ್ಯಾಂಕ್ ಖಾತೆಯಿಂದ 30/12/2020 ರಿಂದ 19/05/2021 ರವರೆಗೆ ಹಣ ವರ್ಗಾಯಿಸುವಂತೆ ಸೂಚಿಸಿದ ಪ್ರಕಾರ ಶ್ರೀನಿವಾಸ್ ರವರು ಆರೋಪಿಗಳ Bizzrun Salessmart Exim Pvt. Ltd, bizzurn india ಹಾಗೂ vyaapaar infoindia pvt.Ltd ಸಂಸ್ಥೆಯ ಖಾತೆಗಳಿಗೆ ಒಟ್ಟು 26,50,054 ರೂ. ಹಣವನ್ನು ವರ್ಗಾವಣೆ ಮಾಡಿಕೊಂಡು ಯಾವುದೇ ಕೆಲಸ ಮಾಡಿಕೊಡದೆ ಶ್ರೀನಿವಾಸ್ ರವರಿಗೆ ವಂಚನೆ, ನಂಬಿಕೆ ದ್ರೋಹ ಮಾಡಿರುವುದಾಗಿದೆ ನ್ಯಾಯಾಲಯದಿಂದ ಆದೇಶದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅ. ಕ್ರ.56/2021 ಕಲಂ: 406,417,420 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.